ಹೊಸದಿಗಂತ ವರದಿ, ಬಾಗಲಕೋಟೆ:
ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡಮಿ ಸರ್ವಸದಸ್ಯರ ಸಭೆಯಲ್ಲಿ 2020-21ನೇ ಸಾಲಿನ ಗೌರವ ಪ್ರಶಸ್ತಿಗೆ 5 ಜನ, ಮತ್ತು 10 ಜನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ಇಂದು ಗುರುವಾರ ತಿಳಿಸಲಾಗಿದೆ. ಗೌರವ ಪ್ರಶಸ್ತಿಗೆ ತಲಾ 50 ಸಾವಿರ ರು.ಗಳ ಗೌರವ ಧನ ಮತ್ತು ಸನ್ಮಾನ , ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ರು.ಗಳ ಗೌರವ ಧನ ಮತ್ತು ಸನ್ಮಾನ ಒಳಗೊಂಡಿದೆ.
ಈ ಪ್ರಶಸ್ತಿ ಸಮಾರಂಭವು ಏಪ್ರಿಲ್-2022ರ ತಿಂಗಳ ಮೊದಲ ವಾರದಂದು ಬಾಗಲಕೋಟೆಯಲ್ಲಿ ಜರುಗಲಿದೆ ಎಂದು ಕರ್ನಾಟಕ ಬಯಲಾಟ ಅಕಾಡಮಿಯ ರಿಜಿಸ್ಟಾçರ್ ಹೇಮಾವತಿ ಎನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ವಾರ್ಷಿಕ ಪ್ರಶಸ್ತಿಗೆ ದೊಡ್ಡಾಟದ ಬೀದರ ಜಿಲ್ಲೆಯ ಕಲಾವಿದರಾದ ರಾಮಶೆಟ್ಟಿ ಬಂಬುಳಗೆ, ಬೆಳಗಾವಿಯ ಸಣ್ಣಾಟ ಕಲಾವಿದ ನಾಗಪ್ಪ ಸೂರ್ಯವಂಶಿ, ಬಾಗಲಕೋಟೆಯ ಪಾರಿಜಾತ ಕಲಾವಿದೆ ದುರ್ಗವ್ವ ಮುಧೋಳ, ಹಾವೇರಿಯ ದೊಡ್ಡಾಟ ಕಲಾವಿದ ರಾಮಪ್ಪ ಕುರಬರ, ಬೆಳಗಾವಿಯ ಸಣ್ಣಾಟ ಕಲಾವಿದ ನಿಂಗೌಡ ಪಾಟೀಲ, ವಿಜಯಪುರದ ಬಯಲಾಟ ಕಲಾವಿದ ರೇವಣಗೊಂಡ ಸಿ.ಬಿರಾದಾರ, ಬಳ್ಳಾರಿಯ ಬಯಲಾಟ ಕಲಾವಿದ ಕೆ.ಹೇಮಾರಡ್ಡಿ, ಬೆಳಗಾವಿಯ ಪಾರಿಜಾತ ಕಲಾವಿದ ಶಿವಪ್ಪ ಕುಂಬಾರ, ಬಳ್ಳಾರಿಯ ದೊಡ್ಡಾಟ ಕಲಾವಿದ ಜಿ.ವೀರನಗೌಡ ಜಿ.ಚಂದ್ರಪ್ಪ, ಬೆಂಗಳೂರಿನ ತೊಗಲುಗೊಂಬೆ ಕಲಾವಿದ ಡಾ.ಟಿ.ಗೋವಿಂಗರಾಜು ಆಯ್ಕೆಯಾಗಿದ್ದಾರೆ.