ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ವಿರುದ್ಧ ರಷ್ಯ ದಾಳಿ ಆರಂಭಿಸಿದ್ದು, ನಿನ್ನೆ ನಡೆದ ದಾಳಿಯಲ್ಲಿ137ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಉಕ್ರೇನ್ನ ಉತ್ತರ, ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಯುತ್ತಿದ್ದು, ಉಕ್ರೇನ್ನ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ. ರಷ್ಯಾ ದಾಳಿ ಆರಂಭದ ನಂತರ ಈವರೆಗೂ ಸೈನಿಕರು, ನಾಗರಿಕರು ಸೇರಿ 137 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಎರಡನೇ ಮಹಾಯುದ್ಧನ ನಂತರ ಯುರೋಪ್ ಮೊದಲ ಅತಿದೊಡ್ಡ ಯುದ್ಧ ನೋಡುತ್ತಿದೆ. ತಾವು ಉಕ್ರೇನ್ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನನ್ನ ಕುಟುಂಬ ಕೂಡ ಇಲ್ಲೇ ಇದೆ ಎಂದು ಹೇಳಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್ ಮತ್ತಿತರ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ರಷ್ಯಾ ಹೊಂದಿರಬಹುದು ಎಂದು ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.