ಉಕ್ರೇನ್ ರಾಜಧಾನಿ ರಷ್ಯದ ಕೈವಶವಾಗೋದಕ್ಕೆ ಕ್ಷಣಗಣನೆ? ಕೇವಲ ಮೂವತ್ತೇ ಕಿಲೋಮೀಟರ್ ದೂರದಲ್ಲಿ ರಷ್ಯ ಸೇನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ರಾಜಧಾನಿ ಕೀವ್ ನಿಂದ  ರಷ್ಯದ ಪಡೆಗಳು ಕೇವಲ 32 ಕಿಲೋಮೀಟರ್ ದೂರದಲ್ಲಿದ್ದು, ಉಕ್ರೇನ್ ಸರ್ಕಾರವನ್ನು ಬೀಳಿಸುವ ಸನ್ನಾಹದಲ್ಲಿವೆ ಎಂದು ಬಿಡೆನ್ ಆಡಳಿತದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೂಲಗಳನ್ನು ಉಲ್ಲೇಖಿಸಿ ಸಿ ಎನ್ ಎನ್ ಈ ವರದಿ ಮಾಡಿದೆ. ಇತ್ತ, ರಷ್ಯದ ಪುಟಿನ್ ಮಾತ್ರ ಅದಾಗಲೇ ತಮಗೆ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವ ಇರಾದೆಯೂ ಇಲ್ಲ, ಅಲ್ಲಿಂದ ಸ್ವಾತಂತ್ರ್ಯ ಬಯಸಿರುವ ಕೆಲ ಪ್ರಾಂತ್ಯಗಳ ಪರವಾಗಿ ಮಾತ್ರವೇ ತಮ್ಮ ಮಿಲಿಟರಿ ಕಾರ್ಯಾಚರಣೆ ಎಂದಿದ್ದಾರೆ.

ಆದರೆ, ಉಕ್ರೇನ್ ರಾಜಧಾನಿ ರಷ್ಯದ ಗಡಿಗೆ ತಾಗಿಕೊಂಡೇನೂ ಇಲ್ಲ. ಅಷ್ಟಾಗಿಯೂ ತನ್ನ ಮಿತ್ರರಾಷ್ಟ್ರ ಬೆಲಾರೂಸ್ ಸಹಾಯದಿಂದ ಗಡಿಯೊಳಗೆ ನುಗ್ಗಿರುವ ರಷ್ಯ ಪಡೆ ಕೀವ್ ಅನ್ನು ಸಮೀಪಿಸುತ್ತಿದ್ದು, ಅಮೆರಿಕ ಅಧಿಕಾರಿಗಳ ಪ್ರಕಾರ ಕೇವಲ 32 ಕಿ.ಮೀ. ದೂರದಲ್ಲಿ ಈ ಪಡೆಗಳಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್ ರಾಜಧಾನಿ ರಷ್ಯದ ಕೈವಶವಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!