ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಲು ಸಿದ್ಧ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಮಧ್ಯೆ ಯಾರೂ ತಲೆಹಾಕಬಾರದು ಎಂದು ರಷ್ಯಾ ಎಚ್ಚರಿಕೆ ನೀಡಿದ ಮಧ್ಯೆಯೇ ವಿಶ್ವಬ್ಯಾಂಕ್ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ಗೆ ಸಹಾಯ ಮಾಡಲು ಮುಂದಾಗಿದೆ.
ಆರ್ಥಿಕ ನೆರವು ನೀಡಲು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಪಾಲುದಾರ ದೇಶಗಳಿಗೆ ವಿಶ್ವಬ್ಯಾಂಕ್ ಸಮೂಹವು ತ್ವರಿತವಾಗಿ ಹಣಕಾಸು ಸಹಾಯ ಮತ್ತು ರಾಜತಾಂತ್ರಿಕ ಬೆಂಬಲ ನೀಡಲು ಸಿದ್ಧ ಎಂದು ವಲ್ಡ್‌ಬ್ಯಾಂಕ್ ಹೇಳಿದೆ.
ಉಕ್ರೇನ್‌ನಲ್ಲಿ ಆಗುತ್ತಿರುವ ಜೀವಹಾನಿಗೆ ವಿಶ್ವ ಬ್ಯಾಂಕ್ ಆತಂಕ ವ್ಯಕ್ತಪಡಿಸಿದ್ದು, ಉಕ್ರೇನ್ ವಿಶ್ವಬ್ಯಾಂಕ್‌ನ ದೀರ್ಘಕಾಲದ ಪಾಲುದಾರ ಸದಸ್ಯ ರಾಷ್ಟ್ರ. ಇಂಥ ಸಂದರ್ಭದಲ್ಲಿ ದೇಶದ ಬೆಂಬವಾಗಿ ನಿಲ್ಲುತ್ತೇವೆ ಎಂದು ವಿಶ್ವಬ್ಯಾಂಕ್ ಹೇಳಿದೆ.