ಹೊಸದಿಗಂತ ವರದಿ,ವಿಜಯಪುರ:
ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಮತ್ತೆ ಆಯ್ಕೆಯಾಗಿ, ಮುಖ್ಯಮಂತ್ರಿ ಆಗಲೆಂದು ಹಾಗೂ ಪಕ್ಷದ ಅಭೂತಪೂರ್ವ ವಿಜಯಕ್ಕಾಗಿ ನಗರದ ಸಿದ್ಧೇಶ್ವರ ದೇವಸ್ಥಾನ ಮತ್ತು ಕಪಿಲೇಶ್ವರ ದೇವಸ್ಥಾನದಲ್ಲಿ ಯೋಗಿ ಅಭಿಮಾನಿಗಳು ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು.
ಡಾ.ಬಾಬು ರಾಜೇಂದ್ರ ನಾಯಕ, ಸಿದ್ಧೇಶ್ವರ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರು, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ, ದೇಶ ರಕ್ಷಕ ಪಡೆಯ ರೋಹನ ಆಪ್ಟೆ, ಆದಿತ್ಯ ತಾವರಗೇರಿ, ಅಮಿತ್ ದೇಸಾಯಿ, ರಂಜನಿ ಸಂಬಣ್ಣಿ, ಪ್ರೀತಿ ಪಾಟೀಲ,ಭಾಜಪ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆರ್. ಎಚ್. ಚವ್ವಾಣ ಇದ್ದರು.