ಒಂದೇ ರಾಜ್ಯದ 4 ಮೈದಾನಗಳಲ್ಲಿ ಈ ಬಾರಿಯ ಐಪಿಎಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 26 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ipl) ಆರಂಭವಾಗಲಿದ್ದು,ಮೇ 29 ರಂದು ಫೈನಲ್ ನಡೆಯಲಿದೆ. ಈ ಬಾರಿ ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.
ಬಿಸಿಸಿಐ ನಾಲ್ಕು ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ.
ಗುರುವಾರ ಸಂಜೆ ನಡೆದ ಬಿಸಿಸಿಐನ ಐಪಿಎಲ್ ಆಡಳಿತ ಮಂಡಳಿ ವರ್ಚುವಲ್ ಸಭೆಯ ಸಂದರ್ಭದಲ್ಲಿ ಟೂರ್ನಿಯನ್ನು ಒಂದೇ ರಾಜ್ಯದಲ್ಲಿ ಆಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೋವಿಡ್ -19 ಸೋಂಕು ಹೆಚ್ಚಾಗಿ ಹರಡಲು ಅವಕಾಶವಿರುವ ವಿಮಾನ ಪ್ರಯಾಣವನ್ನು ತಪ್ಪಿಸಲು ಹಾಗು ಬಯೋಬಬಲ್ ವಾತಾವರಣದಲ್ಲಿ ಪಂದ್ಯ ನಡೆಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಒಟ್ಟು 70 ಲೀಗ್ ಪಂದ್ಯಗಳು ಮುಂಬೈ ಮತ್ತು ಪುಣೆಯ ನಾಲ್ಕು ಅಂತಾರಾಷ್ಟ್ರೀಯ ಮೈದಾನಗಳಲ್ಲಿ ನಡೆಯಲಿವೆ.
ಎಲ್ಲ 10 ತಂಡಗಳು ತಲಾ 14 ಪಂದ್ಯಗಳನ್ನಾಡಲಿದ್ದು, ಈ ಪೈಕಿ ಏಳು ತವರು ಮೈದಾನ ಹಾಗೂ ಏಳು ಮತ್ತೊಂದು ಮೈದಾನದಲ್ಲಿ ಆಡಲಿವೆ. ಪ್ರತಿ ತಂಡ ಐದು ತಂಡಗಳ ವಿರುದ್ಧ ಎರಡು ಪಂದ್ಯ ಆಡಲಿದ್ದು, ಉಳಿದ ನಾಲ್ಕು ತಂಡಗಳ ವಿರುದ್ಧ ಕೇವಲ ಒಂದು ಪಂದ್ಯ ಆಡಲಿದೆ. ಲೀಗ್​​ ಸುತ್ತಿನ ನಂತರ, ನಾಲ್ಕು ಪ್ಲೇಆಫ್​​ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಸ್ಥಳ ಮತ್ತು ದಿನಾಂಕ ನಿಗದಿಗೊಂಡಿಲ್ಲ.
ಗ್ರೂಪ್​ ಎ ತಂಡಗಳು
ಮುಂಬೈ ಇಂಡಿಯನ್ಸ್​, ಕೋಲ್ಕತ್ತಾ ನೈಟ್​ ರೈಡರ್ಸ್​, ರಾಜಸ್ಥಾನ ರಾಯಲ್ಸ್​, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್​ ಜೈಂಟ್ಸ್​
ಗ್ರೂಪ್ ಬಿ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್​, ಸನ್​ರೈಸರ್ಸ್ ಹೈದರಾಬಾದ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್​,, ಗುಜರಾತ್​ ಟೈಟನ್ಸ್​​

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!