ಹೊಸದಿಗಂತ ವರದಿ, ಶಿರಸಿ:
ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಅಡಿ ಡ್ರೈವರ್ ಕ್ಲೀನರ್ ಬೋರ್ಡ್’ ಮಾಡಲಾಗುವುದು ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಹಾರರೊಂದಿಗೆ ಮಾತನಾಡಿದ ಅವರು ಬಜೆಟ್ ನಲ್ಲಿ ವಾಹನ ಚಾಲಕರು ಮತ್ತು ಕ್ಲೀನರ್ ಸೇರಿದಂತೆ ಚಾಲನಾ ವೃತ್ತಿಗೆ ಸಂಬಂಧಿಸಿದ ಎಲ್ಲಾರೀತಿಯ ಕೆಲಸ ಮಾಡುವವರಿಗಾಗಿ ಬೋರ್ಡ್ ಸ್ಥಾಪಿಸಲಾಗುತ್ತಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳ ಕುಟುಂಬಕ್ಕೆ ಇದು ಸಹಾಯವಾಗಲಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ ಒಂದು ಮಿನಿ ಆಂಬ್ಯುಲೆನ್ಸ್ ನೀಡಲಾಗುತ್ತಿದ್ದು, ಕಾರ್ಮಿಕರ ಆರೋಗ್ಯ ಚಿಕಿತ್ಸೆಗೆ ಇದನ್ನು ಬಳಸಿಕೊಳ್ಳಲಾಗುವುದು. ಕೆಲ ಜಿಲ್ಲೆಗಳಲ್ಲಿ ಹಾಲಿ ಆಂಬ್ಯುಲೆನ್ಸ್ ಕೆಲಸ ಮಾಡುತ್ತಿದೆ ಎಂದರು.
ಅದೇರೀತಿ ಪ್ರತಿ ಜಿಲ್ಲೆಯಲ್ಲಿ ಚಾಲಕರು ಮತ್ತು ಇತರರಿಗೆ ತಂಗಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ 10 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಇದ್ದು, ಇದನ್ನು ಪ್ರತಿ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.
ಇಶ್ರಮ್ ಯೋಜನೆ:
ಶ್ರಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಇಶ್ರಮ್ ವೆಬ್ ಪೋರ್ಟ್ಲ್ ಲ್ ನ ಅಡಿ 59 ಲಕ್ಷ ಜನ ನೋಂದಣಿಯಾಗಿದ್ದು, 1.50 1.85 ಕೋಟಿ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಇಶ್ರಮ್ ಯೋಜನೆಯಡಿ ನೋಂದಣಿಯಾದವರಿಗೆ
ಅಟಲ್ ಪಿಂಚಣಿ ಯೋಜನೆಯಡಿ ದೊರೆಯುವ ಎಲ್ಲಾ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.
ಈ ವ್ಯಾಪ್ತಿಯಲ್ಲಿ ಪುರೋಹಿತರು, ಅಡಿಗೆ ಭಟ್ಟರು, ರಿಪೇರಿ ಕೆಲಸ ಮಾಡುವವರು, ದೋಬಿ, ಛಾಯಾಗ್ರಾಹರು ಸೇರಿಸಂತೆ 30
391 ವಿವಿಧ ವರ್ಗದ ಕೆಲಸಗಾರರು ಈ ವ್ಯಾಪ್ತಿಗೆ ಸೇರುವರು ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಜಿಲ್ಲೆ ಘೋಣೆಗೆ ಮನವಿ:
ಉತ್ತರ ಕನ್ನಡ ಜಿಲ್ಲೆಗೆ ಬಜೆಟ್ ನಲ್ಲಿ ಕೊಡುಗೆ ನೀಡಲಿ ಹಲವು ಬೇಡಿಕೆಯನ್ನು ಇಡಲಾಗಿದೆ. ಮುಖ್ಯವಾಗಿ ಜಿಲ್ಲೆಯನ್ನು ಪ್ರವಾಸೋದ್ಯಮ ಜಿಲ್ಲೆ ಎಂದು ಘೋಷಿಸಿ. ಬನವಾಸಿ ಪ್ರಾಧಿಕಾರಕ್ಕೆ ಹಣ ಮಂಜೂರು ಮಾಡಿ, ಮಧುಕೇಶ್ವರ ದೇವಾಲಯದ ರಥ ನಿರ್ಮಾಣಕ್ಕೆ ಅನುದಾನ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಜಿಲ್ಲೆಯ ಇ ಸ್ವತ್ತು ಸಮಸ್ಯೆ ಬಗೆಹರಿಸಲು ಬಜೆಟ್ ಸೆಷನ್ ಬಳಿಕ ಪ್ರತ್ಯೇಕ ಸಭೆ ಕರೆಯಲಾಗುವುದು. ಈ ವೇಳೆ ಇಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಬೆಟ್ಟಾ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.