ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ನವಜಾತ ಶಿಶುವನ್ನು ಕಳೆದುಕೊಂಡ ನೋವಿನ ನಡುವೆಯೂ ಬರೋಡಾ ಬ್ಯಾಟರ್ ವಿಷ್ಣು ಸೋಲಂಕಿ ಅವರು ಶುಕ್ರವಾರ ಭರ್ಜರಿ ಶತಕ ಸಿಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಜನಿಸಿದ್ದ ತಮ್ಮ ಹೆಣ್ಣುಮಗುವಿನ ಸಾವಿನ ದುಃಖದಲ್ಲಿದ್ದರೂ,ವಿಷ್ಣು ಸೋಲಂಕಿ ರಂಜಿ ಪಂದ್ಯದಲ್ಲಿ ಬರೋಡಾ ಪರ ಮೈದಾನಕ್ಕೆ ಮರಳಿ ಚಂಡೀಗಡ ವಿರುದ್ಧ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.
ಭುವನೇಶ್ವರದಲ್ಲಿ ರಣಜಿ ಟೂರ್ನಿಯಲ್ಲಿದ್ದ ಸೋಲಂಕಿಪಂದ್ಯಕ್ಕೂ ಮುನ್ನ ಅವರಿಗೆ ಕೆಟ್ಟ ಸುದ್ದಿ ಕೇಳಿಬಂದಿತ್ತು. ಅದೇನೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಜನಸಿದ್ದ ಅವರ ಹೆಣ್ಣು ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಸುದ್ದಿ ತಿಳಿದ ತಕ್ಷಣ ವಡೋದರಕ್ಕೆ ಮರಳಿದ ಸೋಲಂಕಿ ತಮ್ಮ ಮಗಳ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ 3 ದಿನಗಳ ನಂತರ ಮತ್ತೆ ಭುವನೇಶ್ವರಕ್ಕೆ ಬಂದಿದ್ದರು.
ಈ ದುಃಖದ ಸಂದರ್ಭದಲ್ಲೂ ವಿಶ್ರಾಂತಿ ಬಯಸದೇ ತಂಡಕ್ಕಾಗಿಆಡಿ ಒಚಂಡೀಗಡ ವಿರುದ್ಧ 165 ಎಸೆತಗಳಲ್ಲಿ 12 ಬೌಂಡರಿ ಸಹಿತ 104 ರನ್ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.