ಹೊಸ ದಿಗಂತ ವರದಿ, ಮಂಡ್ಯ :
ಸಕ್ಕರೆ ನಾಡು ಮಂಡ್ಯಕ್ಕೆ ‘ಏಕ್ ಲವ್ ಯಾ’ ಚಿತ್ರ ತಂಡ ಭೇಟಿ ನೀಡಿತ್ತು. ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು.
ನಟ, ನಿರ್ದೇಶಕ ಪ್ರೇಮ್, ನಟಿ ರಕ್ಷೀತಾ, ಚಿತ್ರ ನಟ ರಾಣಾ, ನಟಿ ರೇಷ್ಮಾ ಅವರು ಭೇಟಿ ನೀಡಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದರು.
ಈ ವೇಳೆ ಏಕ್ ಲವ್ ಯಾ ತಂಡಕ್ಕೆ ಅಭಿಮಾನಿಗಳು ಅದ್ದೂರಿ ಹೂ ಮಳೆಗೈದು ಪಟಾಕಿ ಸಿಡಿಸಿ, ಹೂ ಮಳೆ ಸುರಿದರು. ಅಭಿಮಾನಿಗಳೊಂದಿಗೆ ಪ್ರೇಮ್ ಹಾಗೂ ರಕ್ಷಿತಾ ಜೊತೆ ಸೆಲ್ಫಿಗೆ ಮುಗಿಬಿದ್ದರು.