ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನ ಹಾರ್ಕಿವ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.
ಕ್ಷಿಪಣಿ ದಾಳಿಗೆ 112 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಾರ್ಕಿವ್ ಮೇಯರ್ ತಿಳಿಸಿದ್ದಾರೆ.
ಹಾರ್ಕಿವ್ ನಗರದ ಪ್ರದೇಶಿಕ ಆಡಳಿತದ ಕಟ್ಟಡ ಫ್ರೀಡಮ್ ಸ್ಕ್ವೇರ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, 21 ನಾಗರಿಕರು ಮೃತಪಟ್ಟಿದ್ದಾರೆ.
ನಿನ್ನೆ ನಡೆದ ದಾಳಿಯಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು, ಡಚ್ ರಾಯಭಾರಿ ಮಾರ್ಟಿನ್ ಬರ್ಗ್ ಸಂತಾಪ ಸೂಚಿಸಿದ್ದಾರೆ. ಉಕ್ರೇನ್ ಪರಿಸ್ಥಿತಿ ಭೀಕರವಾಗಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ರಷ್ಯಾ ದಾಳಿಗೆ ಭಾರತದ ವಿದ್ಯಾರ್ಥಿ ಮೃತಪಟ್ಟಿರುವುದು ವಿಷಾದನೀಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.
We're facing uncertain times, it's horrible what's happening in Ukraine. We're looking to it closely with India for a mature solution through diplomacy. We regret about Indian students & victim who lost his life, our condolences to the family:Dutch Ambassador to India Marten Berg pic.twitter.com/1oZjAC11r8
— ANI (@ANI) March 2, 2022