ಆಳಂದ ಪಟ್ಟಣದಲ್ಲಿ ಗಲಭೆ: ರಾಶಿಗಟ್ಟಲೆ ಕಲ್ಲಿನ ದೃಶ್ಯ ಕಂಡು ದಂಗಾದ ಪೋಲಿಸ್ ಇಲಾಖೆ

ಹೊಸದಿಗಂತ ವರದಿ, ಕಲಬುರಗಿ:

ಆಳಂದ ಪಟ್ಟಣದ ಲಾಡ್ಲೆ ಮಶಾಕ ದಗಾ೯ದಲ್ಲಿರುವ ಶಿವಲಿಂಗ ಶುದ್ದೀಕರಣಕ್ಕೆ ಬಿಜೆಪಿ ಮುಖಂಡರು ತೆರಳಿದಾಗ,ಅನ್ಯ ಧಮಿ೯ಯರು ಪೋಲಿಸರ,ಸಚಿವರ ಮೇಲೆ ಕಲ್ಲೂ ತುರಾಟ ಮಾಡಿ,ಉದ್ವಿಗ್ನ ಪರಿಸ್ಥಿತಿ ಗೆ ಕಾರಣವಾಗಿದ್ದರು. ಆದರೆ ಮರುದಿನ ಘಟನಾ ಸ್ಥಳಕ್ಕೆ ಪರೀಶಿಲನೆಗೆಂದು ಪೋಲಿಸ್ ಇಲಾಖೆ ತೆರಳಿದಾಗ ರಾಶಿ ರಾಶಿ ಕಲ್ಲಿನ ದೃಶ್ಯವನ್ನು ಕಂಡು ದಂಗಾಗಿದ್ದಾರೆ.

ಆಳಂದ,ನ ಲಾಡ್ಲೆ ಮಶಾಕ ದಗಾ೯ ಬಳಿ ಕಲ್ಲುಗಳನ್ನ ಸಂಗ್ರಹಿಸಿ, ಶೇಖರಣೆ ಮಾಡಿ ಇಡಲಾಗಿದೆ. ಹೀಗಾಗಿ ನಿನ್ನೆ ನಡೆದ ಕಲ್ಲೂ ತೂರಾಟದ ಘಟನೆ ಪೂವ೯ ನಿಯೋಜಿತವೆ ಎಂಬ ಅನುಮಾನ ಕಾಡುತ್ತಿದ್ದು, ಇದೀಗ ತನಿಖೆಯ ನಂತರವೇ ಸತ್ಯ ಹೊರ ಬಿಳಲಿದೆ.

ದಗಾ೯ ಸುತ್ತ ಮುತ್ತಲಿನ ಅನೇಕ ಕಟ್ಟಡಗಳ ಮೇಲೆ ಮೊದಲೆ ಕಲ್ಲು ಸಂಗ್ರಹಣೆ ಮಾಡಿಕೊಂಡು, ಅನ್ಯ ಕೋಮಿನ ಜನರು ಕಲ್ಲು ತೂರಾಟಕ್ಕೆ ಸಿದ್ದರಾಗಿದ್ದರು, ಪೋಲಿಸರನ್ನು ಯಾಮಾರಿಸಿ ಕಲ್ಲು ಸಂಗ್ರಹ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!