ಹೆಚ್ಚುತ್ತಿರುವ ನಮ್ಮ ಶಕ್ತಿಯಿಂದ ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರ ಸುಲಭವಾಗಿದೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಶಕ್ತಿ ಹೆಚ್ಚುತ್ತಿದ್ದು, ಇದರಿಂದ ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರ ಸುಲಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವು ಭಾರತೀಯರ ರಕ್ಷಣೆಗಾಗಿ ಯಾವುದೇ ಸಣ್ಣ ಅವಕಾಶವನ್ನು ಕೈಬಿಡಲ್ಲ.ಇದಕ್ಕಾಗಿ ಭಾರತ ಸಮರ್ಥವಾಗಿದೆ. ನಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಆಪರೇಷನ್ ಗಂಗಾ ನಡೆಸುತ್ತಿದ್ದೇವೆ. ಈ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತಿದೆ. ಇದಕ್ಕಾಗಿ ಭಾರತವು ತನ್ನ ನಾಲ್ವರು ಮಂತ್ರಿಗಳನ್ನು ಕಳುಹಿಸಲಾಗಿದೆ ಎಂದರು.
ಉಕ್ರೇನ್‌ನಲ್ಲಿ ಸಿಲುಕಿರುವ ನಾಗರಿಕರನ್ನುರಕ್ಷಿಸಲು ನಾವು ದೊಡ್ಡ ಅಭಿಯಾನವನ್ನು ನಡೆಸುತ್ತಿರುವುದು ಭಾರತದ ಹೆಚ್ಚಿರುವ ಸಾಮರ್ಥ್ಯದಿಂದಾಗಿ ಎಂದು ಹೇಳಿದರು.
ಈಗಾಗಲೇ ಆಪರೇಷನ್ ಗಂಗಾ ಮೂಲಕ ಸಾವಿರಾರು ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಇನ್ನೂ ಹಲವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!