ಹೊಸದಿಗಂತ ವರದಿ,ತುಮಕೂರು:
ಉಕ್ರೇನ್ ನಲ್ಲಿ ಮೃತರಾದ ವಿದ್ಯಾರ್ಥಿಗಳಿಗೆ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅವರು ತುಮಕೂರಿನಲ್ಲಿರುವ ಸುದ್ದಿಗಾರರಜೊತೆ ಮಾತನಾಡುತ್ತಾ ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯದ ಬಗ್ಗೆ ಸಂಬಂಧಿಸಿದ ಸಚಿವರು ಮಾತನಾಡುತ್ತಾರೆ ಎಂದರು.
ಔರಾಧಕರ್ ವರದಿ ಅನುಷ್ಠಾನ ಬಜೆಟ್ ನಲ್ಲಿ ಬರಬೇಕಂತಿಲ್ಲ. ಆವತ್ತಿನ ಸರಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಇದರಿಂದ ಹಿರಿಯ ಪೊಲೀಸರಿಗೆ- ಅಧಿಕಾರಿಗಳಿಗೆ ಇದರಿಂದ ತೊಂದರೆಯಾಗಿದೆ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದರು.
ಶಿವಮೊಗ್ಗ ಹರ್ಷ ಕುಟುಂಬಕ್ಕೆ ಟಿಕೆಟ್ ಕೊಡುವ ವಿಚಾರಧದ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ನವರ ಕಾಲದಲ್ಲಿ ಸತ್ತವರಿಗೆಲ್ಲಾ ಟಿಕೇಟ್ ಕೊಟ್ಟಿದ್ದಾರಾ? ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತದೆ ಎಂದರು.
ಆದರೆ ಆ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತಿದ್ದೇವೆ. ಎಲ್ಲಕಿಂತ ಮುಖ್ಯವಾಗಿ ಹರ್ಷನ ತಾಯಿ ನನಗೆ ಹೇಳಿರುವಂತೆ. ಮಗನ ಪ್ರಾಣ ತಂದುಕೊಡುವಂತೆ ಕೇಳಲ್ಲ. ಅವನ ಸಾವು ಅರ್ಥ ಹೀನ ಆಗಬಾರದು, ವ್ಯರ್ಥ ಆಗಬಾರದು. ಅವನು ಒಂದು ಉದ್ದೇಶಕೋಸ್ಕರ ಸತ್ತಿದ್ದಾನೆ.\ ಅದಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ್ದಾರೆ.
ಅದನ್ನ ನಾವು ಮಾಡುತ್ತಾ ಇದ್ದೇವೆ ಎಂದರು.
ಶಿವಮೊಗ್ಗ ಪೊಲೀಸರ ವಿರುದ್ದದ ತನಿಖೆ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಎರಡೂ ಠಾಣೆಯ ವಿರುದ್ದ ತನಿಖೆ ನಡೀತಿದೆ. ಎರಡೂ ಠಾಣೆಯಲ್ಲಿ ಆರೋಪಿಗಳ ವಿರುದ್ದ ೧೦-೧೫ ಕೇಸ್ ಇದೆ. ಯಾಕೆ ಅದನ್ನು ಇಷ್ಟು ದಿನ ಬೆಳೆಸಿ ಇಟ್ಟುಕೊಂಡಿದ್ದರು. ನಮ್ಮ ಪೊಲೀಸರ ಕರ್ತವ್ಯದಲ್ಲಿ ಏನು ಎಡವಟ್ಟು ಆಗಿದ ಸಮಾಜ ವಿದ್ರೋಹಿಗಳು ಬೆಳೆಯುವ ನಿಟ್ಟಿನಲ್ಲಿ ಪೊಲೀಸರ ಪಾತ್ರ ಏನಿದೆ ಎಂಬುದನ್ನು ತಿಳಿಕೊಳ್ಳುವ ಅವಶ್ಯಕತೆ ಇದೆ. ಇಲಾಖೆ ವೈಫಲ್ಯತೆ ಪೊಲೀಸರ ವೈಫಲ್ಯತೆ ಬಗ್ಗೆ ಜನ ಆರೋಪ ಮಾಡುತ್ತಾರೆ.ಮ್ ಹಾಗಂತ ಪೊಲೀಸರನ್ನು ನಾನು ಬಿಟ್ಟುಕೊಡುತಿದ್ದೇನೆ ಅಂತಲ್ಲ. ಅನ್ಯಾಯ ಯಾರೂ ಮಾಡಿದರೂ ಒಂದೇ. ಸಾಮಾನ್ಯ ಜನರಿಗೆ ಒಂದು , ಪೊಲೀಸರಿಗೆ ಒಂದು, ಗೃಹ ಸಚಿವರಿಗೆ ಒಂದು ಕಾಯಿದೆ ಅಲ್ಲ. ನಿನ್ನೆಯಿಂದ ಪೊಲೀಸರ ವಿರುದ್ದ ತನಿಖೆ ಆರಂಭವಾಗಿದೆ. ಒಂದು ವಾರದಲ್ಲಿ ವರದಿ ನೀಡಲು ಹೇಳಿದ್ದೇನೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ ಎಂದರು.