ಆಳಂದ ಪ್ರಕರಣದ ತನಿಖೆಯನ್ನುಎನ್.ಐ.ಎ. ಮೂಲಕ ನಡೆಸಲಿ: ಆಂದೋಲಾ ಶ್ರೀ

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ ಬಳಿ ನಡೆದ ಕಲ್ಲು ತೂರಾಟ ಮತ್ತು ಲಾಠಿ ಚಾಜ್೯ ಪ್ರರಣದ ಸಂಪೂರ್ಣ ತನಿಖೆಯನ್ನು ಎನ್.ಐ.ಎ. ಮೂಲಕ ನಡೆಸಬೇಕೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಆಂದೋಲಾ, ದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಗ್ರಹಿಸಿದರು.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಳಂದನಲ್ಲಿ 144 ಸೆಕ್ಷನ್ ಜಾರಿಯಿದ್ದರು, ದಗಾ೯ ಆವರಣದಲ್ಲಿ ಕಲ್ಲು,ಲಾಠಿ ಮತ್ತು ಮಾರಕಾಸ್ತ್ರಗಳು ಹೇಗೆ ರವಾನೆಯಾದವು ಎಂದು ಪ್ರಶ್ನಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರದಲ್ಲೆ ಬಜರಂಗದಳ ಕಾಯ೯ಕತ೯ನನ್ನು ಮತಾಂಧಾರಿಗಳು ಹತ್ಯೆಗೈದಿದ್ದಾರೆ. ಅದೇ ರೀತಿ ಆಳಂದನಲ್ಲಿ ಸಹ ಸಂಸದರ,ಶಾಸಕರ,ಡಿಸಿ,ಎಸ್ಪಿ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಿ ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

144 ನಿಷೇಧಾಜ್ಞೆ ಹೇರಿದರೂ, ನಾಲ್ಕು ದಿನಗಳಿಂದ ಪೋಲಿಸ್ ವರಿಷ್ಠಾಧಿಕಾರಿ,ಪೋಲಿಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದರೂ ಗಲಭೆ ತಡೆಯಲು ಎಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಅವರು,ಗಲಭೆಗೆ ಪ್ಲಾನ್ ಹೇಗೆ ಸಿದ್ದಗೊಳಿಸಿದರು ಎಂಬುದನ್ನು ಉತ್ತರಿಸಲಿ ಎಂದು ಹೇಳಿದರು.

ಆಳಂದ ಸಿಪಿಐ ಮಂಜುನಾಥ್ ಮುಸ್ಲಿಂ, ರಿಗೆ ಸಹಕಾರ ನೀಡಿದ ಪರಿಣಾಮ ಗಲಭೆಯಾಗಿದೆ ಎಂದು ಶ್ರೀ ಗಳು ಇದೇ ಸಂದರ್ಭದಲ್ಲಿ ಆರೋಪ ಮಾಡಿದ್ದಾರೆ. ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ ಅವರಿಗೆ ಗಲಭೆ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ ಎಂದು ಕಿಡಿಕಾರಿದ ಅವರು,ಹಿಂದೂಗಳ ಹತ್ಯೆಯಾದರೆ ಅದಕ್ಕೆ ನೇರ ಎಸ್ಪಿ,ಡಿವೈಎಸ್ಪಿ, ಸಿಪಿಐ ಅವರೆ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!