ರಷ್ಯ ದಾಳಿಗೆ ಉಕ್ರೇನಿನ ಅಣು ವಿದ್ಯುತ್ ಘಟಕಕ್ಕೆ ಬೆಂಕಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯುರೋಪಿನ ಅತಿದೊಡ್ಡ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಘಟಕ ಎನಿಸಿರುವ ಝಪೊರಿಜಿಯಾದ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿರುವ ಆತಂಕದ ವಿದ್ಯಮಾನ ವರದಿಯಾಗಿದೆ.

ರಷ್ಯನ್ ದಾಳಿಯಲ್ಲಿ ಈ ವಿದ್ಯಮಾನ ಸಂಭವಿಸಿದೆ ಎಂದು ಉಕ್ರೇನ್ ಸರ್ಕಾರದ ಪರ ವಕ್ತಾರರೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬಿಡೆನ್ ಸಹಿತ ವಿಶ್ವ ನಾಯಕರೆಲ್ಲ ತಲೆಕೆಡಿಸಿಕೊಳ್ಳುವಂತಾಯಿತು. ರಷ್ಯವು ಯುದ್ಧವನ್ನು ನಿಲ್ಲಿಸಿ ಈ ನ್ಯೂಕ್ಲಿಯರ್ ವಿದ್ಯುತ್ ಘಟಕ ಸರಿಯಾಗುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹವೂ ಬಂತು.

ಆದರೆ, ನಂತರ ಬಂದ ಮಾಹಿತಿಗಳ ಪ್ರಕಾರ, ಅಣು ವಿದ್ಯುತ್ ಸ್ಥಾವರದ ಮುಖ್ಯ ಭಾಗಕ್ಕೆ ಯಾವುದೇ ಹಾನಿಯಾಗಿಲ್ಲದಿರುವುದರಿಂದ, ವಿಕಿರಣ ಸೋರಿಕೆಯ ಅಪಾಯ ಸದ್ಯಕ್ಕೆ ಇಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here