ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ರಿಪಬ್ಲಿಕ್ ಕೊಟ್ಟ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನಲಾಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತದೆ ಎನ್ನಲಾಗಿದೆ.
ಆದರೆ ಇಂಡಿಯಾ ಟುಡೇ ಹಾಗೂ ಟುಡೇಸ್ ಚಾಣಕ್ಯ ಮಾತ್ರ ಉತ್ತರಾಖಂಡದಲ್ಲಿ ಬಿಜೆಪಿ ಗೆಲ್ಲೋದು ಪಕ್ಕಾ ಎಂದು ಭವಿಷ್ಯ ನುಡಿದಿದೆ.
ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ ಹೇಳಿರುವ ಪ್ರಕಾರ , ಉತ್ತರಾಖಂಡ 70 ಸ್ಥಾನಗಳಲ್ಲಿ ಬಿಜೆಪಿ+ 29-34 ರಷ್ಟು ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 33-38 ಸ್ಥಾನ ಪಡೆಯಬಹುದು, ಬಿಎಸ್ಪಿ 01-33 ಸ್ಥಾನ ಸಿಕ್ಕರೆ, ಇತರರು 01-03 ಪಡೆಯುತ್ತಾರೆ ಎಂದು ಹೇಳಿವೆ.
ಈಟಿಜಿ ರಿಸರ್ಚ್ ಮತಗಟ್ಟೆ ಸಮೀಕ್ಷೆ
ಬಿಜೆಪಿ+ 37-40ರಷ್ಟು ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 29-32, ಬಿಎಸ್ಪಿ 00-01 , ಹಾಗು ಇತರರು 01-02 ರಸ್ತು ರಷ್ಟು ಸ್ಥಾನ ಪಡೆಯುವ ಸಾಧ್ಯತೆವಿದೆ.
ಮ್ಯಾಜಿಕ್ ನಂಬರ್: 36