Exit Polls 2022: ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಸರಕಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿಗೆ ಗದ್ದುಗೆ ಹಿಡಿಯಲಿದೆ ಮೆದು ನ್ಯೂಸ್ ಎಕ್ಸ್ -ಪೋಲ್ ಸ್ಟ್ರಾಟ್ ಮತದಾನೋತ್ತರ ಸಮೀಕ್ಷೆ ಹೇಳಿದೆ.
ಇಂದು ಯುಪಿಯಲ್ಲಿ ಅಂತಿಮ ಹಂತದ ಮತದಾನ ನಡೆದಿದ್ದು, ಆ ಬಳಿಕ ಹಲವು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ಪ್ರಕಟಿಸಿವೆ.
ಈ ಪೈಕಿ ಯುಪಿಯಲ್ಲಿ ಬಿಜೆಪಿಯು 202ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ನ್ಯೂಸ್ ಎಕ್ಸ್ -ಪೋಲ್ ಸ್ಟ್ರಾಟ್ ಸಮೀಕ್ಷೆ ತಿಳಿಸಿದೆ.
ನ್ಯೂಸ್ ಎಕ್ಸ್ -ಪೋಲ್ ಸ್ಟ್ರಾಟ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿಕೂಟ – 211 – 225ಸ್ಥಾನದಲ್ಲಿ ಗೆದ್ದು, ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದು,
ಸಮಾಜವಾದಿ ಮೈತ್ರಿಕೂಟ – 146 – 160 ಸ್ಥಾನಕ್ಕೆ ತೃಪ್ತಿ ಪಡಲಿದೆ. ಬಿಎಸ್ಪಿ – 14 – 24 , ಕಾಂಗ್ರೆಸ್ ಮೈತ್ರಿಕೂಟ – 4 – 6 ಸ್ಥಾನ ಗೆಲುವ ಮೂಲಕ ಸಮಾಧಾನ ಪಡೆಯಲಿದೆ.
ಜೀರೋ ರಿಸರ್ಚ್‌ನ ಸಮೀಕ್ಷೆ
ಗ್ರೌಂಡ್ ಜೀರೋ ರಿಸರ್ಚ್‌ನ ಅಭಿಪ್ರಾಯ ಸಂಗ್ರಹದ ಪ್ರಕಾರ,ಬಿಜೆಪಿ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ . ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳ ಪೈಕಿ ಆಡಳಿತಾರೂಢ ಕೇಸರಿ ಪಕ್ಷವು 230 ರಿಂದ 235 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟ 160 ರಿಂದ 165 ಸ್ಥಾನಗಳನ್ನು ಗೆಲ್ಲುತ್ತದೆ. ಕಾಂಗ್ರೆಸ್ 3 ರಿಂದ 7 ಹಾಗೂ ಬಿಎಸ್ಪಿ 2 ರಿಂದ 5 ಸ್ಥಾನಗಳನ್ನು ಪಡೆಯುತ್ತವೆ ಎಂದು ಅಂಕಿ-ಅಂಶಗಳು ತಿಳಿಸಿದ್ದವು.
ಜೀ ಚುನಾವಣಾಪೂರ್ವ ಸಮೀಕ್ಷೆ ಫಲಿತಾಂಶ:
ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟುಡೇ ಚಾಣಕ್ಯ ನಡೆಸಿರುವ ಚುನಾವಣಾಪೂರ್ವ ಅಭಿಪ್ರಾಯ ಸಮೀಕ್ಷೆಯೂ ಹೇಳಿತ್ತು. ಟುಡೇ ಚಾಣಕ್ಯ ನಡೆಸಿರುವ ಅಭಿಪ್ರಾಯ ಸಮೀಕ್ಷೆಯು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಒಲಿಯಲಿದೆ ಎನ್ನುವ ಅಂಕಿ-ಅಂಶಗಳನ್ನು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!