ಜರ್ಮನಿ-ರಷ್ಯಾ ಗ್ಯಾಸ್‌ ಪೈಪ್‌ಲೈನ್‌ ಮುಚ್ಚಿದರೆ ತೈಲ ಬೆಲೆ 300 ಡಾಲರ್‌ಗಿಂತ ಹೆಚ್ಚಳ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಕ್ರಮದ ಭಾಗವಾಗಿ ಜರ್ಮನಿ-ರಷ್ಯಾ ನಡುವಿನ ಗ್ಯಾಸ್‌ ಪೈಪ್‌ಲೈನ್‌ ಮುಚ್ಚುವ ನಿರ್ಣಯ ಕೈಗೊಂಡರೆ, ಅದಕ್ಕೆ ಪ್ರತ್ಯುತ್ತರವಾಗಿ ರಷ್ಯಾ ತನ್ನ ತೈಲರಫ್ತು ನಿಲ್ಲಿಸುವ ಸಾಧ್ಯತೆಗಳಿವೆ. ಹೀಗಾದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರತಿ ಬ್ಯಾರೆಲ್‌ಗೆ ಕಚ್ಛಾತೈಲಕ್ಕೆ 300 ಡಾಲರ್‌ಗಿಂತ ಹೆಚ್ಚಿನ ಬೆಲೆ ತೆರಬೇಕಾದ ಸನ್ನಿವೇಶಗಳು ಉದ್ಭವಿಸಲಿದೆ ಎಂದು ಭಾರತದ ಹಿರಿಯ ಸಚಿವರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಯೂರೋಪಿಯನ್‌ ಒಕ್ಕೂಟವು ರಷ್ಯಾ ತೈಲರಫ್ತುಗಳ ಮೇಲೆ ನಿರ್ಬಂಧ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ಅಮೇರಿಕಾ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್‌ ಹೇಳಿಕೆ ನೀಡಿದ ಬೆನ್ನಲ್ಲೇ ಸೋಮವಾರ ತೈಲದರಗಳು ಭಾರೀ ಏರಿಕೆ ಕಂಡಿದ್ದವು. 2008 ರ ನಂತರದ ವರ್ಷಗಳಲ್ಲೇ ಅತಿಹೆಚ್ಚಿನ ಬೆಲೆಏರಿಕೆ ದಾಖಲಾಗಿತ್ತು.
ರಷ್ಯಾದ ತೈಲ ರಫ್ತಿನ ಮೇಲೆ ನಿರ್ಬಂಧ ಹೇರಿದರೆ ಅದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣಗಳನ್ನು ಸೃಷ್ಟಿಸುವುದು ಖಚಿತ ಎಂದು ಎಚ್ಚರಿಸಿದ್ದಾರೆ ರಷ್ಯ ಉಪ ಪ್ರಧಾನಿ ಅಲೆಗ್ಜಾಂಡರ್‌ ನೋವಾಕ್‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!