ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಆರ್.ಎ. ರಂಗಸ್ವಾಮಿ (93) ಇಂದು ನಿಧನರಾಗಿದ್ದಾರೆ.
ಅವರು ಕೊಲ್ಕತ್ತದಲ್ಲಿ ಆರ್.ಎಸ್.ಎಸ್. ಸಂಘ ಚಾಲಕರಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ಬಂದ ನಂತರ ಶಂಕರಪುರಂ ಭಾಗ ಸಂಘ ಚಾಲಕರಾಗಿ ಮತ್ತು ವನವಾಸಿ ಕಲ್ಯಾಣ ಆಶ್ರಮದ ಪ್ರಾಂತದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರು ಒಬ್ಬ ಆದರ್ಶ ಸೇವಕರಾಗಿ, ಕಾರ್ಯಕರ್ತರಾಗಿ ನಮ್ಮೆಲ್ಲರಿಗೂ ಮೇಲ್ಪಂಕ್ತಿಯಾಗಿದ್ದರು. ಸಂಘದ ಪದ್ಧತಿಗಳನ್ನು ಆಚರಣೆಯಲ್ಲಿ ಅನುಸರಿಸಿ ಉತ್ತಮ ಕಾರ್ಯಕರ್ತರಾಗಿ ಎಲ್ಲರೊಂದಿಗೆ ಪ್ರೀತಿಯಿಂದ ವಾತ್ಸಲ್ಯದಿಂದ ಮಾತನಾಡುತ್ತಿದ್ದರು. ಅವರ ಕಾರ್ಯ ಶೈಲಿ ಅನುಕರಣೀಯ. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ವನವಾಸಿ ಕಲ್ಯಾಣ್ಯಾಶ್ರಮದ ವಿಶ್ವಸ್ಥ ಹಾಗೂ ಆರ್.ಎಸ್.ಎಸ್. ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಸಂತಾಪ ಸೂಚಿಸಿದ್ದಾರೆ.