ದಿನಭವಿಷ್ಯ
ಮೇಷ
ಉದ್ವಿಗ್ನತೆ, ಅಸಹನೆ, ಆತಂಕಗಳು ಕಾಡುತ್ತವೆ. ಸಂವಹನದ ಕೊರತೆ ಇದಕ್ಕೆ ಕಾರಣ. ನಿಮ್ಮ ಅಹಂ ಬಿಟ್ಟು ವರ್ತಿಸಿ. ಇತರರ ಭಾವನೆಗೆ ಸ್ಪಂದಿಸಿರಿ.
ವೃಷಭ
ಉತ್ತಮ ಫಲಿತಾಂಶದ ದಿನ. ನಿಮ್ಮ ಹಿಂದಿನ ಪರಿಶ್ರಮಕ್ಕೆ, ಹೂಡಿಕೆಗೆ ಇಂದು ಫಲ ಸಿಗುವುದು. ಕುಟುಂಬ ದಲ್ಲಿ ಸಂಭ್ರಮದ ವಾತಾವರಣ.
ಮಿಥುನ
ನಿಮ್ಮ ಕಠಿಣ ದುಡಿಮೆಗೆ ಉತ್ತಮ ಫಲ ದೊರಕುವುದು. ಮೇಲ ಕಾರಿಗಳ ಮೆಚ್ಚುಗೆ. ಉದ್ಯಮಿಗಳಿಗೆ ಲಾಭ. ವಿದ್ಯಾರ್ಥಿ ಗಳಿಗೆ ಯಶಸ್ಸು.
ಕಟಕ
ವೃತ್ತಿಯಲ್ಲಿ ಅಥವಾ ಅಧ್ಯಯನದಲ್ಲಿ ಉತ್ತಮ ಫಲ ಪಡೆಯ ಬೇಕಾದರೆ ಕಠಿಣ ಪರಿಶ್ರಮ ಅವಶ್ಯ. ಕೆಲಸ ಮಾಡದೆ ಪ್ರತಿಫಲ ಸಿಗಬೇಕು ಎಂದು ಕಾಯದಿರಿ.
ಸಿಂಹ
ಇತರರ ವರ್ತನೆಯನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಅವರ ವರ್ತನೆ ನಿಮ್ಮ ಮೇಲೂ ಪರಿಣಾಮ ಬೀರಬಹುದು. ಹಣ ಹೂಡಿಕೆಯಿಂದ ಲಾಭ.
ಕನ್ಯಾ
ವೃತ್ತಿಯಲ್ಲಿ ಸಹೋದ್ಯೋಗಿಗಳ ಜತೆ ಸಮಸ್ಯೆ. ಭಿನ್ನಾಭಿಪ್ರಾಯ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಅವಶ್ಯ ನೆರವು ಒದಗುವುದು.
ತುಲಾ
ನಿಮ್ಮ ಹೊಂದಾಣಿಕೆ ಸ್ವಭಾವವು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಕಾರ್ಯವು ಸುಲಭದಲ್ಲಿ ಈಡೇರುತ್ತದೆ. ಕೌಟುಂಬಿಕ ಸಂತೋಷ.
ವೃಶ್ಚಿಕ
ಹಳೆಯ ಹೂಡಿಕೆ ಯಿಂದ ಇಂದು ಧನಲಾಭ ಉಂಟಾಗ ಬಹುದು.ಶಾಪಿಂಗ್ ಸಂಭವ. ಕುಟುಂಬಸ್ಥರಿಗೆ ತುಸು ಹೆಚ್ಚು ವ್ಯಯಿಸಿರಿ.
ಧನು
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ಯಶಸ್ಸು. ಆತ್ಮವಿಶ್ವಾಸ ವೃದ್ಧಿ. ದೂರ ಪ್ರಯಾಣವನ್ನು ತಪ್ಪಿಸಿ. ಆರೋಗ್ಯದ ಮೇಲೆ ಪರಿಣಾಮವಾದೀತು.
ಮಕರ
ಇಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳದಿರಿ. ಅದು ನಿಮಗೆ ಒಳಿತು ತಾರದು. ವಿವಾಹದ ವಿಷಯದಲ್ಲಿ ತುಸು ಕಾದು ನೋಡುವುದು ವಿಹಿತ.
ಕುಂಭ
ವೃತ್ತಿಯಲ್ಲಿ ಯಶಸ್ಸು. ಸಂಗಾತಿಯ ಜತೆಗೆ ಅವಿಸ್ಮರಣೀಯ ಕ್ಷಣ ಕಳೆಯುವಿರಿ. ಶೇರಿ ನಲ್ಲಿ ಹಣ ಹೂಡಿಕೆಗೆ ಸಕಾಲವಲ್ಲ. ಆರೋಗ್ಯಕ್ಕೆ ಗಮನಕೊಡಿ.
ಮೀನ
ಇಂದಿನ ಪ್ರತಿಯೊಂದು ಕಾರ್ಯವೂ ಸಫಲವಾಗುವುದು. ಕೌಟುಂಬಿಕ ವ್ಯವಹಾರದಲ್ಲಿ ಎಲ್ಲರ ಬೆಂಬಲ ಪಡೆಯುವಿರಿ. ಆರೋಗ್ಯ ಸುಧಾರಣೆ.