ಬೇಕಾಗಿರುವ ಪದಾರ್ಥಗಳು
ಸಾಸಿವೆ
ಈರುಳ್ಳಿ
ಹಸಿಮೆಣಸಿನಕಾಯಿ
ಕರಿಬೇವು
ಕೊತ್ತಂಬರಿ
ಉಪ್ಪು
ಟೊಮಾಟೋ
ಅರಿಶಿನ
ಚಿಲ್ಲಿ ಪೌಡರ್
ಕಾಳುಮೆಣಸು ಪುಡಿ
ಧನಿಯಾ ಪುಡಿ
ಜೀರಿಗೆ
ಎಣ್ಣೆ
ಅನ್ನ
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ.
ನಂತರ ಅದಕ್ಕೆ ಟೊಮಾಟೋ, ಅರಿಶಿನ, ಚಿಲ್ಲಿ ಪೌಡರ್, ಕಾಳುಮೆಣಸು ಪುಡಿ, ಧನಿಯಾ ಪುಡಿ, ಜೀರಿಗೆ ಹಾಗೂ ಉಪ್ಪು ಹಾಕಿ ಫ್ರೈ ಮಾಡಿ.
ಬಳಿಕ ಸಿದ್ಧವಿರುವ ವೀಶ್ರಣವನ್ನು ಅನ್ನಕ್ಕೆ ಹಾಕಿ ಕಲಸಿದರೆ ಟೇಸ್ಟಿಯಾದ ಟೊಮಾಟೋ ರೈಸ್ ಸಿದ್ಧ