ಮಹಿಳಾ ವಿಶ್ವಕಪ್‌: ವಿಂಡೀಸ್‌ ಎದುರು 155 ರನ್‌ ಗಳ ಭರ್ಜರಿ ಜಯ ಗಳಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌  ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 155 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್‌ ನ ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಬಳಿಕ 8 ವಿಕೆಟ್‌ ನಷ್ಟಕ್ಕೆ 317 ರನ್‌ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
119 ಬಾಲ್‌ ಗಳಲ್ಲಿ ಬರೋಬ್ಬರಿ 13 ಬೌಡರಿ, 2 ಸಿಕ್ಸರ್‌ ಭಾರಿಸಿ ಒಟ್ಟು 123 ರನ್‌ ಸಿಡಿಸಿ ತಂಡಕ್ಕೆ ಉತ್ತಮ ಅಂಕ ನೀಡಿರು. ಇನ್ನು ಹರ್ಮನ್‌ ಪ್ರೀತ್ ಕೌರ್‌ 107 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸ್‌ ಮೂಲಕ 109 ರನ್‌ ಗಳಿಸಿಕೊಟ್ಟರು.
ಇನ್ನು 318 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್‌ ತಂಡ ಶುಭಾರಂಭ ನೀಡದರೂ ಕೂಡ ಎಲ್ಲಾ ವಿಕೆಟ್‌ ನಷ್ಟಕ್ಕೆ 162 ರನ್‌ ಮಾತ್ರ ಕಲೆ ಹಾಕಲು ಸಾಧ್ಯವಾಯಿತು.
ಆರಂಭದಲ್ಲಿ ಜೊತೆಯಾಟವಾಡಿದ ಡಿಯಾಂಡ್ರಿ ದೊತ್ತಿನ್‌ ಮತ್ತು ಹೀಲಿ ಮ್ಯಾಥ್ಯೂಸ್‌ ಶತಕ ನೀಡಿದರು. ದೊತ್ಇನ್‌ 46 ಬಾಲ್‌ ಗಳಲ್ಲಿ 62 ರನ್‌ ಗಳಿಸಿದರೆ, ಮ್ಯಾಥ್ಯೂಸ್‌ 30 ಎಸೆತಗಳಲ್ಲಿ 43 ರನ್‌ ಪಡೆದರು.
ಆದರೆ ಈ ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಂಡ ವಿಂಡೀಸ್‌ ಪಡೆ ಭಾರತದೆದುರು ಸೋಲನುಭವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!