ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಲ್ಫ್ ರಾಷ್ಟ್ರಗಳ ಇತಿಹಾಸದಲ್ಲಿ ಮೊದಲ ಬಾರಿಗೆ 81 ಅಪರಾಧಿಗಳಿಗೆ ಒಂದೇ ದಿನ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.
ಹತ್ಯೆಗಳು, ಪ್ರಾರ್ಥನೆ ಸ್ಥಳಗಳ ಮೇಲಿನ ದಾಳಿಗಳು ಮುಂತಾದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ 81 ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
81 ಮಂದಿಯಲ್ಲಿ 73 ಮಂದಿ ಸೌದಿ ಸೇರಿದವರು. ಯೆಮನ್ಗೆ ಸೇರಿದ ಏಳು ಮಂದಿ ಮತ್ತು ಸಿರಿಯಾಗೆ ಸೇರಿದ ಒಬ್ಬರಿದ್ದಾರೆ. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೆ ಶನಿವಾರ ಶಿಕ್ಷೆ ನೀಡಲಾಗಿದೆ.
ಈ ಹಿಂದೆ 1979ರಲ್ಲಿ ಮೆಕ್ಕಾದಲ್ಲಿನ ಪವಿತ್ರ ಮಸೀದಿಯನ್ನು ವಶಕ್ಕೆ ಪಡೆದುಕೊಂಡ ಕಾರಣಕ್ಕೆ 63 ಮಂದಿಗೆ ಗಲ್ಲು ಶಿಕ್ಷೆ ಘೋಷಿಸಿದ್ದು, ಅವರಿಗೆ 1980ರ ಜನವರಿಯಲ್ಲಿ ಸಾಮೂಹಿಕ ಮರಣದಂಡನೆಯನ್ನು ವಿಧಿಸಲಾಗಿತ್ತು.