ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಈ ಬೇಸಿಗೆಯಲ್ಲಿ 60 ಹೊಸ ದೇಶೀ ವಿಮಾನಗಳನ್ನು ಪ್ರಾರಂಭಿಸಲಿದೆ.
ಈ ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆ ಮಾಹಿತಿ ನೀಡಿದ್ದು, ಮಾ.27ರಿಂದ 60 ಹೊಸ ವಿಮಾನಗಳು ಸಂಚಾರ ಆರಂಭಿಸಲಿದ್ದು, ಅ.29ಕ್ಕೆ ಕೊನೆಗೊಳ್ಳಲಿದೆ. ಮೊದಲ ಹಂತದಲ್ಲಿ ವಿಮಾನಗಳು ಗೋರಖ್ ಪುರ, ಕಾನ್ಪುರ, ವಾರಣಾಸಿ, ಜೈಪುರ, ಧರ್ಮಶಾಲಾ, ಶಿರಡಿ, ತಿರುಪತಿಗೆ ಹಾರಾಟ ಆರಂಭಿಸಲಿದೆ.
ಸ್ಪೈಸ್ ಜೆಟ್ ಗೆ ಸೇರ್ಪಡೆಯಾದ ವಿಮಾನಗಳಲ್ಲಿ ಏಳು ಉಡಾನ್ (UDAN) ವಿಮಾನಗಳು, ಎಂಟು ಇಂಡಸ್ಟ್ರಿ ಫಸ್ಟ್ ವಿಮಾನಗಳು ಜತೆಗೆ ವಿಮಾನಗಳಿಗೆ ಹೊಸ ಸಂಪರ್ಕ ಹಾಗೂ ಹೆಚ್ಚುವರಿ ವಿಮಾನಗಳು ಸೇರಿವೆ ಎಂದು ತಿಳಿಸಿದೆ.