ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ಗೆ ಶಸ್ತ್ರಾಸ್ತ್ರಗಳು, ಜನರಿಗೆ ಆಹಾರ, ನೀಡುವುದರ ಜೊತೆಗೆ ನಿರಾಶ್ರಿತರಿಗೆ ನೆಲೆಯನ್ನು ಒದಗಿಸಲಾಗುವುದು ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂಘರ್ಷಪೀಡಿತ ನಾವು ಉಕ್ರೇನ್ ಗೆ ನಾವು ಮಾನವೀಯ ನೆರವುಗಳನ್ನು ನೀಡಲು ಬದ್ಧರಾಗಿದ್ದೇವೆ. ಆಕ್ರಮಣಕಾರಿ ರಷ್ಯಾದ ಪಡೆಯ ವಿರುದ್ಧ ಹೋರಾಡಲು ಉಕ್ರೇನ್ ಜನರಿಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ. ಉಕ್ರೇನಿಯನ್ ಜೀವಗಳನ್ನು ಉಳಿಸಲು ಹಣ ಮತ್ತು ಆಹಾರ ಮತ್ತು ಎಲ್ಲಾ ರೀತಿಯ ಸಹಾಯವನ್ನು ನೀಡುತ್ತೇವೆ.
ನಾವು ಉಕ್ರೇನಿಯನ್ ನಿರಾಶ್ರಿತರನ್ನು ಮುಕ್ತ ತೋಳುಗಳೊಂದಿಗೆ ನಮ್ಮ ದೇಶಕ್ಕೆ ಸ್ವಾಗತಿಸುತ್ತೇವೆ. ಅಮೇರಿಕಾ ಮತ್ತು ಜಗತ್ತು ಉಕ್ರೇನ್ ಜನರೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ