ಉಕ್ರೇನ್‌ ಸಂಘರ್ಷ: ನ್ಯಾಟೋ ನಾಯಕರ ಜತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷದ ಕುರಿತು ಮುಂದಿನ ವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ನ್ಯಾಟೋ ನಾಯಕರ ಜತೆ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ವಿದೇಶಿ ಸುದ್ದಿ ಮೂಲಗಳು ಮಾಹಿತಿ ನೀಡಿದ್ದು, ಮಾ.23ರಂದು ಯುಎಸ್‌ ಅಧ್ಯಕ್ಷ ಜೊ ಬಿಡೆನ್‌ ಹಾಗೂ ನ್ಯಾಟೋ ನಾಯಕರು ಬ್ರಸೆಲ್ಸ್‌ ನಲ್ಲಿ ಭೇಟಿ ಮಾಡಿ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ರಷ್ಯಾದ ಸೈನಿಕರ ಮೇಲೆ ನಡೆದ ನಕಲಿ ದಾಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್‌ನಲ್ಲಿ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಲು ರಷ್ಯಾ ಯೋಜಿಸುತ್ತಿದೆ ಎಂದು ಹೇಳಿದೆ.
ರಷ್ಯಾದ ಪಡೆಗಳು ಉಕ್ರೇನ್‌ ಮೇಲೆ ದಾಳಿ ಉಲ್ಬಣಗೊಳಿಸುತ್ತಿರುವ ನಿಟ್ಟಿನಲ್ಲಿ ಸಭೆ ನಡೆಸಲಿದೆ. ಯುಸ್‌ ಪಡೆ ರಷ್ಯಾ ವಿರುದ್ಧ ನೇರ ದಾಳಿ ನಡೆಸುವುದಿಲ್ಲ ಆದರೆ ನ್ಯಾಟೋ ಪ್ರದೇಶಗಳ ಪ್ರತಿ ಇಂಚಿನ ಭೂಮಿಯನ್ನು ರಕ್ಷಿಸುತ್ತದೆ ಎಂದು ಅಮೆರಿಕ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!