(ಪ್ರಾತಿನಿಧಿಕ ಚಿತ್ರ)
ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಷ್ಯ ವಶಪಡಿಸಿಕೊಂಡಿರುವ ಉಕ್ರೇನಿನ ಖೇರ್ಸನ್ ನಗರದಿಂದ ಒಬ್ಬ ವಿದ್ಯಾರ್ಥಿ ಹಾಗೂ ಇಬ್ಬರು ಉದ್ದಿಮೆ ವ್ಯಕ್ತಿಗಳನ್ನು ಮಂಗಳವಾರ ಅಲ್ಲಿಂದ ಹೊರತರಲಾಗಿದೆ. ಈ ಪ್ರಕ್ರಿಯೆಯಲ್ಲಿ ರಷ್ಯ ಸೇನೆಯ ಸಂಪೂರ್ಣ ಸಹಕಾರವಿತ್ತು ಎಂದು ಇಂಡಿಯನ್ ಎಕ್ಸ್ಪೆಸ್ ಪತ್ರಿಕೆ ಮಾಸ್ಕೊದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇವರನ್ನು ರಷ್ಯ ರಾಜಧಾನಿ ಮಾಸ್ಕೊಕ್ಕೆ ಕರೆತಂದು ಅಲ್ಲಿಂದ ವಿಮಾನ ಹತ್ತಿಸಲಾಗಿದೆ. ಒಬ್ಬರು ಚೆನ್ನೈಗೆ ಹಾಗೂ ಇನ್ನಿಬ್ಬರು ಅಹಮದಾಬಾದಿಗೆ ತಲುಪಿಕೊಳ್ಳಲಿದ್ದಾರೆ. ಈವರೆಗಿನ ರಕ್ಷಣಾ ಕಾರ್ಯಾಚರಣೆಗಳಲ್ಲಿ ಉಕ್ರೇನಿನ ಪಶ್ಚಿಮ ಗಡಿಯ ದೇಶಗಳಾದ ಪೊಲ್ಯಾಂಡ್, ಹಂಗರಿ, ರೊಮಾನಿಯಾ, ಸ್ಲೋವಿಕ್ ರಿಪಬ್ಲಿಕ್ ಮೂಲಕವೇ ಭಾರತೀಯರನ್ನು ಕರೆತರಲಾಗಿತ್ತು. ರಷ್ಯದ ಮೂಲಕ ಭಾರತೀಯರ ವಾಪಸಾತಿಗೆ ಅನುಕೂಲ ಕಲ್ಪಿಸಿರುವುದು ಇದೇ ಮೊದಲು.
ಸಂಘರ್ಷ ಶುರುವಾದಾಗಿನಿಂದ ಸುಮಾರು 22,000 ಭಾರತೀಯರನ್ನು ಉಕ್ರೇನಿನಿಂದ ರಕ್ಷಿಸಲಾಗಿದೆ. ಈ ಪೈಕಿ 17,000 ಮಂದಿ ಬಾರತದ ವಿಶೇಷ ವಿಮಾನಗಳ ಮೂಲಕ ಬಂದಿದ್ದಾರೆ. ಕೆಲವರು ಸಂಘರ್ಷದ ನಡುವೆಯೂ ಅಲ್ಲಿ ಇರುವ ನಿರ್ಣಯ ಕೈಗೊಂಡಿದ್ದಾರೆ.