ಚೆನೈ ಸೂಪರ್‌ ಕಿಂಗ್ಸ್‌ ಕ್ಯಾಂಪ್‌ ಸೇರಿದ ಯುವ ವಿಕೆಟ್‌ ಕೀಪರ್‌ ಬನಾ

ಹೊಸದಿಗಂತ ಡಿಜಿಟಲ್ ಡೆಸ್ಕ್‌:
ಐಪಿಎಲ್‌ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 26ರಂದು ಟೂರ್ನಿಗೆ ಮುಂಬೈನಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ಈಗಾಗಲೇ ಎಲ್ಲಾ ತಂಗಳು ಟೂರ್ನಿಗೆ ಸಿದ್ದತೆಯಲ್ಲಿತೊಡಗಿವೆ. ಹಾಲಿ ಚಾಂಪಿಯನ್‌ ಸಿಎಸ್​ಕೆ ತಂಡವು ಕಪ್‌ ತನ್ನಲ್ಲಿಯೇ ಉಳಿಸಿಕೊಳ್ಳುವ ಗುರಿಯೊಂದಿಗೆ ಸೂರತ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.
ಈ ನಡುವೆ ಧೋನಿ ಕ್ಯಾಂಪ್‌ ನಲ್ಲಿ ಅಂಡರ್‌ 19 ಆಟಗಾರನೊಬ್ಬ ಕಾಣಿಸಿಕೊಂಡಿದ್ದಾನೆ. ಈ ಬಾರಿಯ ಐಪಿಎಲ್​ನಲ್ಲಿಹರಾಜಾಗದ ಹರಿಯಾಣದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಬನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ ಕಿಂಗ್ಸ್ ನೆಟ್‌ ವಿಕೆಟ್‌ ಕೀಪರ್‌ ಆಗಿ ಅಭ್ಯಾಸ ಕ್ಯಾಂಪ್​ಗೆ ಕರೆಸಿಕೊಂಡಿದೆ.
ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಆಡಿದ್ದ ದಿನೇಶ್ ಬಾನಾ ಅದ್ಭುತವಾಗಿ ಆಡಿದ್ದರು. ಹಾಗಿದ್ದರೂ ಅವರಿಗೆ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಒಂದೂ ಪ್ರಥಮ ದರ್ಜೆ ಅಥವಾ ಲೀಸ್ಟ್ ಎ ಪಂದ್ಯವಾಡದ ಹಿನ್ನೆಲೆಯಲ್ಲಿ ಅವರಿಗೆ ಐಪಿಎಲ್‌ ನಿಯಮಾವಳಿಗಳ ಪ್ರಕಾರ ಹರಾಜಿನಲ್ಲಿ ಪಾಲ್ಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ.ಇದೀಗ ಸಿಎಸ್​ಕೆ ತಂಡವು ನೆಟ್ ವಿಕೆಟ್ ಕೀಪರ್ ಆಗಿ ದಿನೇಶ್ ಬಾನಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಬನಾ ಪವರ್ ಹಿಟ್ಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ವಿಶ್ವಕಪ್‌ ನಲ್ಲಿ ಅವರ ಸ್ಟ್ರೈಕ್ ರೇಟ್ 190ಕ್ಕಿಂತ ಹೆಚ್ಚಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!