ಪುನೀತ್ ಸದಾ ನಮ್ಮ ಹೃದಯದಲ್ಲೇ ಇರುತ್ತಾರೆ, ಅವರ ಇಲ್ಲ ಅಂತ ಖಂಡಿತ ಅನಿಸಲ್ಲ: ಜೂ. ಎನ್ ಟಿ ಆರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬಹುನಿರೀಕ್ಷಿತ ಆರ್ ಆರ್ ಆರ್(RRR) ಸಿನಿಮಾ 25ರಂದು ರಿಲೀಸ್​ ಆಗಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಇಂದು ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.

ಈಗಾಗಲೇ ಆರ್ ಆರ್ ಆರ್ ತಂಡ ಚಿಕ್ಕಬಳ್ಳಾಪುರದಲ್ಲಿ ಬೀಡುಬಿಟ್ಟಿದ್ದು, ಅದ್ದೂರಿಯಾಗಿ ದ ಪ್ರಿ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂಬಂಧ ಖಾಸಗಿ ರೆಸಾರ್ಟ್​ನಲ್ಲಿ ಆರ್​ ಆರ್ ​ಆರ್​ ತಂಡ ಸುದ್ದಿಗೋಷ್ಠಿ ನಡೆಸಿದ್ದು,ಹಲವಾರು ಮಾಹಿತಿಗಳನ್ನು ಚಿತ್ರತಂಡ ನೀಡಿದೆ.
ಪ್ರೀ-ರಿಲೀಸ್ ಇವೆಂಟ್​​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಗೆ ಆರ್ ​ಆರ್​ ಆರ್​ ತಂಡ ವಿಶೇಷ ನಮನ ಅರ್ಪಿಸಲಿದೆ. ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಬಗ್ಗೆಯೂ ಚಿತ್ರತಂಡ ಮಾತನಾಡಿದೆ.

ಈಗಾಗಲೇ ಕರ್ನಾಟಕದಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರ್ ಆರ್ ಆರ್ ಸಿನಿಮಾದಿಂದ ಜೇಮ್ಸ್ ಚಿತ್ರಕ್ಕೆ ಸಮಸ್ಯೆ ಆಗುತ್ತಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಡ, ಜೇಮ್ಸ್ ಸಿನಿಮಾಗೆ ಯಾವುದೇ ಸಮಸ್ಯೆ ಆಗದಂತೆ ಚಿತ್ರಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಇದೇ ಸಮಯದಲ್ಲಿ ಜೇಮ್ಸ್ ಬಗ್ಗೆ ಮಾತನಾಡಿದ ಜೂ.ಎನ್ ಟಿ ಆರ್, ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಜೇಮ್ಸ್ ಸಿನಿಮಾ ನೋಡಿಲ್ಲ. ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಬೇರೆ ಬೇರಿ ಕಡೆ ಓಡಾಡುತ್ತಿದ್ದೇವೆ. ಹಾಗಾಗಿ ಇನ್ನು ನೋಡಲು ಸಾಧ್ಯವಾಗಿಲ್ಲ.ಆದರೆ ಪುನೀತ್ ಯಾವಾಗಲು ನಮ್ಮ ಜೊತೆ ಇರುತ್ತಾರೆ. ಅನೇಕ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆರ್ ಆರ್ ಆರ್ ಸಿನಿಮಾದ ಎಲ್ಲಾ ಕೆಲಸ ಮುಗಿದ ಮೇಲೆ ಜೇಮ್ಸ್ ನೋಡುತ್ತೇನೆ ಎಂದು ಹೇಳಿದ್ದಾರೆ.

ಪುನೀತ್ ಸದಾ ನಮ್ಮ ಹೃದಯದಲ್ಲೇ ಇರುತ್ತಾರೆ. ಅವರ ಇಲ್ಲ ಅಂತ ಖಂಡಿತ ಅನಿಸಲ್ಲ. ನಮ್ಮ ಹೃದಯಲ್ಲಿ ಯಾವಾಗಲು ಇರುತ್ತಾರೆ. ಇಲ್ಲೇ ಪಕ್ಕದಲ್ಲೇ ಇದ್ದು ಶುಭಹಾರೈಸುತ್ತಿರುತ್ತಾರೆ. ನನಗೆ ಅವರ ಬಗ್ಗೆ ತುಂಬಾ ಗೊತ್ತು ಎಂದು ಜೂ.ಎನ್ ಟಿ ಆರ್ ಪುನೀತ್ ಜೊತೆಗಿನ ಒಡನಾಟದ ಕುರಿತು ಮಾತನಾಡಿದ್ದಾರೆ.

ಜೂ.ಎನ್ ಟಿ ಆರ್ ಮತ್ತು ಪುನೀತ್ ರಾಜ್ ಕುಮಾರ್ ಇಬ್ಬರು ಉತ್ತಮ ಸ್ನೇಹಿತರು. ಅಪ್ಪು ಸಿನಿಮಾಗೆ ಜೂ.ಎನ್ ಟಿ ಆರ್ ಒಂದು ಹಾಡನ್ನು ಸಹ ಹಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!