ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ನನಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ ಅಶೋಕ್ ಮಿತ್ತಲ್, ಡಾ.ಸಂದೀಪ್ ಪಾಠಕ್ ಹಾಗೂ ಸಂಜೀವ್ ಅರೋರಾ ಸೇರಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಪಂಜಾಬ್ನಿಂದ ಆಯ್ಕೆಯಾಗಿದ್ದ ಐವರು ರಾಜ್ಯಸಭಾ ಸದಸ್ಯರ ಅವಧಿಯು ಏ.9ರಂದು ಮುಕ್ತಾಯವಾಗಲಿದೆ. ಹೀಗಾಗಿ ಹೀಗಾಗಿ ಪಂಜಾಬ್ನಿಂದ ತೆರವಾಗುತ್ತಿರುವ ಐದು ಸ್ಥಾನಗಳಿಗೆ ಆಪ್ ಸರ್ಕಾರ ಹರ್ಭಜನ್ ಸಿಂಗ್ ಸೇರಿ ಐವರನ್ನು ನಾಮನಿರ್ದೇಶನ ಮಾಡಿತ್ತು.ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಸುಲಭವಾಗಿ ಆಯ್ಕೆ ನಡೆಯಿತು.
ಮಾ.31ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ 21ರಂದು ಐವರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಗುರುವಾರ (ಮಾ.24) ಕೊನೆಯ ದಿನವಾಗಿತ್ತು. ಆದರೆ, ಯಾರೂ ಕೂಡ ನಾಮಪತ್ರ ಹಿಂಪಡೆಯದೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಂಜಾಬ್ ವಿಧಾನಸಭೆಯ ಕಾರ್ಯದರ್ಶಿ ಸುರೀಂದರ್ ಪಾಲ್ ತಿಳಿಸಿದ್ದಾರೆ.