ಭಾರತದ ಗಡಿಯೊಳಗೆ ಬಂದ ಪಾಕ್ ಮಗು: ಸ್ವದೇಶಕ್ಕೆ ಮರಳಿಸಿದ ಭಾರತೀಯ ಗಡಿ ಭದ್ರತಾ ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದಿಂದ ಪೋಷಕರಿಂದ ತಪ್ಪಿಸಿಕೊಂಡು ನಾಲ್ಕು ವರ್ಷದ ಮಗುವೊಂದು ಭಾರತದ ಗಡಿಯೊಳಗೆ ಬಂದಿದ್ದು, ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಮಗುವನ್ನು ಪಾಕ್​ ರೇಂಜರ್​​ಗಳಿಗೆ ಮರಳಿಸಿದ್ದಾರೆ.
ಪಂಜಾಬ್ ನ ಅಬೋಹರ್​ ಸೆಕ್ಟರ್​​ನಲ್ಲಿ ಬಿಎಸ್​ಎಫ್ ಸಿಬ್ಬಂದಿ​ ಗಸ್ತು ತಿರುಗುತ್ತಿದ್ದ ವೇಳೆ ಮಗುವನ್ನು ನೋಡಿದ್ದಾರೆ. ಬಳಿಕ ಪಾಕಿಸ್ತಾನದ ರೇಂಜರ್​ಗಳನ್ನು ಸಂಪರ್ಕಿಸಿ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ಪಂಜಾಬ್ ಫ್ರಂಟಿಯಾರ್ಸ್‌ ಟ್ವೀಟ್‌ ಮಾಡಿದೆ.
ಪಾಕಿಸ್ತಾನದ ಬಾಲಕಿ ಭಾರತದ ಗಡಿಯೊಳಗೆ ನುಗ್ಗಿದ್ದು, ಮಾನವೀಯತೆಯ ಆಧಾರದ ಮೇಲೆ ಹಸ್ತಾಂತರಿಸಲಾಗಿದೆ ಎಂದು ಭಾರತೀಯ ಗಡಿ ಭದ್ರತಾ ಪಡೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!