ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ವಿವಾದ ಮಾಡುವಂತದ್ದು ಏನಿದೆ: ಅಪ್ಪನ ಪರ ಪುತ್ರ ಡಾ.ಯತೀಂದ್ರ ಬ್ಯಾಟಿಂಗ್

ಹೊಸದಿಗಂತ ವರದಿ, ಮೈಸೂರು:

ಮುಸ್ಲಿಂ ಹೆಣ್ಣು ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು. ಅದಕ್ಕಾಗಿ ಅವರು ದುಪಟ್ಟ ಬಳಸಲು ಅವಕಾಶ ಮಾಡಿಕೊಡುವಂತೆ ತಮ್ಮ ತಂದೆಯವಾರದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ. ದುಪಟ್ಟವನ್ನು ಹೇಗೆ ಬಳಸುತ್ತಾರೆ ಎಂಬುದನ್ನ ಅವರೇ ಹಾಕಿ ತೋರಿಸಿದ್ದಾರೆ. ಇದರಲ್ಲಿ ವಿವಾದ ಮಾಡುವಂತದ್ದು ಏನಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಮ್ಮ ಅಪ್ಪಾಜಿ ಹಿಜಾಬ್ ಬಗ್ಗೆ ಮಾತನಾಡಿಲ್ಲ. ದುಪಟ್ಟದ ಬಗ್ಗೆ ಮಾತನಾಡುವಾಗ ಹಿಂದೂ, ಜೈನ್ ಮಹಿಳೆಯರು ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ. ನಮ್ಮ ನಾಯಕಿ ಇಂದಿರಾಗಾAಧಿ ಕೂಡ ತಲೆಗೆ ಸೆರಗು ಹಾಕುತಿದ್ದರು. ಅವರು ಹಿಜಾಬ್‌ಗೂ ಕಾವಿ ಬಟ್ಟೆಗೂ ಹೋಲಿಕೆ ಮಾಡಿಲ್ಲ. ಸ್ವಾಮೀಜಿಗಳು ಕಾವಿ ಹಾಕುವುದು ಸತ್ಯ ಅಲ್ವಾ. ಎಲ್ಲಾ ಧರ್ಮಗಳಲ್ಲೂ ತಲೆ ಮೇಲೆ ಬಟ್ಟೆ ಹಾಕುವ ಸಂಸ್ಕöÈತಿ ಇದೆ ಎಂಬುದನ್ನು ತಿಳಿಸಿದ್ದಾರಷ್ಟೇ ಎಂದು ಸಿದ್ದರಾಮಯ್ಯರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಹಿಜಾಬ್‌ಗೂ ಸ್ವಾಮೀಜಿಗಳ ಕಾವಿಯೂ ಒಂದೇ ಅಂತ ಹೇಳಿಲ್ಲ. ಇದನ್ನ ಜನ ಸಾಮಾನ್ಯರಿಗೆ ಅರ್ಥ ಮಾಡಿಸಲು ಆ ರೀತಿ ಹೇಳಿದ್ದಾರೆ. ಇದನ್ನು ವಿವಾದ ಮಾಡುವಂತದ್ದು ಏನಿದೆ. ಕೆಲ ಮಾಧ್ಯಮಗಳು ಬಿಜೆಪಿ ಐಟಿ ಸೆಲ್ ರೀತಿ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಬೆಲೆ ಏರಿಕೆ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಯಾರಿಗೆ ಅನುಕೂಲ ಆಗಬೇಕೋ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!