ಪಂಜಾಬ್​ನಲ್ಲಿ ‘ಐ ಲವ್ ಪಾಕಿಸ್ತಾನ್’ ಬರಹದ ಬಲೂನ್ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದ ಗಡಿ ರಾಜ್ಯಗಳಲ್ಲಿ ಐ ಲವ್ ಪಾಕಿಸ್ತಾನ್ ಎಂಬ ಬರಹವಿರುವ ಬಲೂನ್​ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಲೂನ್​ ಅನ್ನು ವಶಕ್ಕೆ ಪಡೆದಿದ್ದಾರೆ.
ಪಂಜಾಬ್​ನ ಜಲಂಧರ್​ ಆದಂಪುರದ ಸಮೀಪದಲ್ಲಿರುವ ಗದ್ದೆಯಲ್ಲಿ ಬಲೂನ್ ಬಂದು ಬಿದ್ದಿದೆ. ಇದರಲ್ಲಿ ಐ ಲವ್ ಪಾಕಿಸ್ತಾನ್ ಎಂಬ ವಾಕ್ಯದ ಜೊತೆಗೆ ಪಾಕಿಸ್ತಾನದ ಧ್ವಜವನ್ನೂ ಬಲೂನ್ ಮೇಲೆ ಮುದ್ರಿಸಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಲೂನ್ ಪಾಕಿಸ್ತಾನದಿಂದ ಅಷ್ಟು ದೂರದವರೆಗೆ ಹಾರುವುದು ಸಾಧ್ಯವಿಲ್ಲ ಎಂದಿರುವ ಆದಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ಜಿಂದರ್ ಸಿಂಗ್, ಆದಂಪುರದಲ್ಲಿ ವಾಯುಪಡೆಯ ನೆಲೆ ಮತ್ತು ವಿಮಾನ ನಿಲ್ದಾಣವೂ ಇರುವ ಕಾರಣದಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!