ಹೊಸದಿಗಂತ ವರದಿ,ವಿಜಯನಗರ:
ನೂತನ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲಿ ಭಾಜಪ ರಾಜ್ಯ ಕಾರ್ಯಕಾರಣಿ ಸಭೆ ಏ.16 ಹಾಗೂ 17 ರಂದು ಎರಡು ದಿನಗಳ ನಡೆಯಲಿದ್ದು, ವೇದಿಕೆ ನಿರ್ಮಾಣ ಕಾರ್ಯಕ್ಕೆ ಪ್ರವಾಸೋದ್ಯಮ ಸಚಿವ ಹಾಗೂ ವಿಜಯನಗರ ನೂತನ ಜಿಲ್ಲೆ ರೂವಾತಿ ಆನಂದ್ ಸಿಂಗ್ ಅವರು ಸೋಮವಾರ ಚಾಲನೆ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಹೊಸಪೇಟೆ ಸಮೀಪದ ಭಟ್ಟರ ಹಳ್ಳಿ ಶ್ರೀ ಆಂಜಿನೇಯ ದೇಗುಲ ಬಳಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ ವೇದಿಕೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಸಚಿವ ಆನಂದ್ ಸಿಂಗ್ ಹಾಗೂ ಸಂಘ ಪರಿವಾರದ ಪ್ರಮುಖ್ ರಾದ ಅರುಣ್ ಜೀ, ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ನೂತನ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಬಳ್ಳಾರಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಪ್ರಮುಖರಾದ ಅನೀಲ್ ನಾಯ್ಡು, ಸಚ್ಚಿದನಾಂದ ಪೂರ್ತಿ, ಪುಟಾಣಿ ಬಸವರಾಜ್, ಶಂಕರ್ ಮೇಟಿ, ಬಂಗಾರು ಹನುಮಂತು, ಅನಂತಪದ್ಮನಾಭ್, ಕಾಮತ್ ಜೀ, ಅಶೋಕ್ ಜೀರೆ, ಮುನ್ನಾಭಾಯಿ, ಸಂದೀಪ್ ಸಿಂಗ್, ಜಿ.ಟಿ.ಪಂಪಾಪತಿ, ಸಿದ್ದೇಶ್ ಸೇರಿದಂತೆ ಅನೇಕ ಜನರು ಗಣ್ಯರು ಇತರರು ಉಪಸ್ಥಿತರಿದ್ದರು. ಭಾಗವಹಿಸಿದ್ದ ಪ್ರತಿಯೋಬ್ಬ ಮುಖಂಡರು ಕೇಸರಿ ಶಾಲು ಧರಿಸಿ ಗಮನಸೆಳೆದರು.