ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾಡಿಕೊಂಡಿರುವ ಐಪಿಎಲ್ ಪ್ರಸಾರದ ಹಕ್ಕಿನ ಒಪ್ಪಂದವು ಈ ಋತುವಿನ ಮುಕ್ತಾಯದೊಂದಿಗೆ ಅಂತ್ಯಗೊಳ್ಳಲಿದ್ದು, ಮುಂದಿನ ಆವೃತ್ತಿಯಿಂದ ಹೊಸ ಒಪ್ಪಂದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ.
2023 ರಿಂದ 2027 ರ ಸೀಸನ್‌ಗಾಗಿ ಐಪಿಎಲ್ ಪ್ರಸಾರದ ಹಕ್ಕಿನ ಒಪ್ಪಂದಕ್ಕಾಗಿ ಜೂನ್ ೧೨ ರಿಂದ ಬಿಸಿಸಿಐ ಟೆಂಡರ್‌ಗಳನ್ನು ಆಹ್ವಾನಿಸಿದೆ. ಇದೇ ಮೊದಲ ಬಾರಿಗೆ ಇ ಹರಾಜು ಪ್ರಕ್ರಿಯೆ ನಡೆಯಲಿದೆ. [email protected] ಗೆ ಇಮೇಲ್ ಮಾಡಲು ಆಸಕ್ತ ಸಂಸ್ಥೆಗಳಿಗೆ ವಿನಂತಿಸಲಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಹೊಸ ಪ್ರಸಾರದ ಹಕ್ಕುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸುವುದರ ಜೊತೆಗೆ ಟೂರ್ನಿಯ ಪ್ರಾಮುಖ್ಯತೆ, ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಭಾರತೀಯ ಮಂಡಳಿಯು ಮುಂದಿನ ಐದು ಸೀಜನ್ ಗಳಿಂದ ( 2023-27) 50,000 ಕೋಟಿ ಗಳಿಸುವ ನಿರೀಕ್ಷೆ ಇರಿಸಿಕೊಂಡಿದೆ. ಎರಡು ಹೊಸ ಪ್ರಾಂಚೈಸಿಗಳು (ಗುಜರಾತ್, ಲಕ್ನೋ) ಸೇರ್ಪಡೆಯೊಂದಿಗೆ ಐಪಿಎಲ್ ಪಂದ್ಯಗಳ ಸಂಖ್ಯೆಯೂ 74 ಕ್ಕೆ ಏರಿದೆ ಕಂಡಿದೆ. ಐಪಿಟಲ್ ವೀಕ್ಷಕಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಬಿಡ್ಡಿಂಗ್ ಗಾಗಿ ವಿವಿಧ ಸಂಸ್ಥೆಗಳ ನಡುವೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.
ಬಿಡ್ಡಿಂಗ್‌ಗಾಗಿ ಝೀ, ಸೋನಿ ಹಾಗೂ ರಿಲಾಯನ್ಸ್ ವೈಕಾಮ್ 18 ಬಾರೀ ಪೈಪೋಟಿ ನಡೆಸಲಿವೆ ಎನ್ನಗಿದೆ. ಅಮೆಜಾನ್ ಪ್ರೈಮ್, ಮೆಟಾ(ಫೇಸ್ ಬುಕ್ ಮಾತೃಸಂಸ್ಥೆ) ಮತ್ತು ಯೂಟ್ಯೂಬ್ ಗಳು ಡಿಜಿಟಲ್ ಸ್ಟ್ರೀಮಿಂಗ್ ಗಾಗಿ ಪೈಪೋಟಿ ನಡೆಸುವ ಸಾಧ್ಯತೆಗಳಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ