ಮಹಿಳೆಯರನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ: ಹಿಜಾಬ್​ ಪರ ಧ್ವನಿ ಎತ್ತಿದ ಭುವನ ಸುಂದರಿ ಹರ್ನಾಜ್​ ಸಂಧು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕು. ಅದರ ಮೇಲೆ ಹೇರಿಕೆ ಸಲ್ಲದು ಎಂದು 2021ರ ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್​ ಸಂಧು ಹಿಜಾಬ್​ ಪರ ಧ್ವನಿ ಎತ್ತಿದ್ದಾರೆ. ಮಹಿಳೆಯರು ತಮ್ಮ ಇಷ್ಟದಂತೆ ಇರಲಿ ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ. ಹಿಜಾಬ್​ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್​ ಮಾಡ್ತೀರಾ? ಎಂದು ಹರ್ನಾಜ್​ ಸಂಧು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹಿಜಾಬ್​ ಬಗ್ಗೆ ಪ್ರಶ್ನಿಸಿದಾಗ ಹರ್ನಾಜ್​ ಸಂಧು ಹಿಜಾಬ್​ ಪರ ಮಾತನಾಡಿದ್ದು, ಹಿಜಾಬ್​ ವಿಷಯದಲ್ಲಿ ಮಹಿಳೆಯರನ್ನು ಟಾರ್ಗೆಟ್​ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಹಿಳೆಯರು ಅವರು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!