ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕು. ಅದರ ಮೇಲೆ ಹೇರಿಕೆ ಸಲ್ಲದು ಎಂದು 2021ರ ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್ ಸಂಧು ಹಿಜಾಬ್ ಪರ ಧ್ವನಿ ಎತ್ತಿದ್ದಾರೆ. ಮಹಿಳೆಯರು ತಮ್ಮ ಇಷ್ಟದಂತೆ ಇರಲಿ ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ. ಹಿಜಾಬ್ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ಎಂದು ಹರ್ನಾಜ್ ಸಂಧು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹಿಜಾಬ್ ಬಗ್ಗೆ ಪ್ರಶ್ನಿಸಿದಾಗ ಹರ್ನಾಜ್ ಸಂಧು ಹಿಜಾಬ್ ಪರ ಮಾತನಾಡಿದ್ದು, ಹಿಜಾಬ್ ವಿಷಯದಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಹಿಳೆಯರು ಅವರು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ.