ಚರಂಡಿ ನೀರು ಸೇರಿ ಕಲುಷಿತಗೊಂಡ ಕೆರೆ; ಜಲಚರ, ಪಕ್ಷಿಗಳ ಸಾವು

ಹೊಸದಿಗಂತ ವರದಿ, ಮೈಸೂರು
ಕೆರೆಯ ನೀರಿಗೆ ಚರಂಡಿ ನೀರು ಸೇರಿ ಕಲುಷಿತಗೊಂಡು ಜಲಚರಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಆಲನಹಳ್ಳಿ ಬಳಿಯ ತಿಪ್ಪಯ್ಯನ ಕೆರೆಯಲ್ಲಿ ನಡೆದಿದೆ.
ಸುತ್ತಮುತ್ತಲಿನ ಬಡಾವಣೆಗಳ ಯುಜಿಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿದ್ದು , ಇದರಿಂದಾಗಿ ಕೆರೆ ನೀರು ಕಲುಷಿತಗೊಂಡು ಮೀನು ಹಾಗೂ ಪಕ್ಷಿಗಳು ಸಾವನ್ನಪ್ಪಿವೆ. ದೂರದ ಊರು, ದೇಶಗಳಿಂದ ಇಲ್ಲಿಗೆ
ವಲಸೆ ಬಂದ ಹಲವು ಜಾತಿಯ ಪಕ್ಷಿಗಳು ಕೂಡ ಕಲುಷಿತ ನೀರಿನಿಂದಾಗಿ ಸಾವನ್ನಪ್ಪಿವೆ. ಅಲ್ಲದೇ ಕೆರೆ ಸುತ್ತ ಕಿಡಿಗೇಡಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಸುರಿದಿದ್ದು, ಕೆರೆ ನೀರು ಕಲುಷಿತವಾಗುತ್ತಿರುವುದರಿಂದ ಅಂತರ್ಜಲವೂ ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಸದ್ಯ ಕೆರೆ ಮೈಸೂರು ಮೃಗಾಲಯದ ನಿರ್ವಹಣೆಯಲ್ಲಿದ್ದು, ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!