ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಶುಭಕೃತ್ ನಾಮ ಸಂವತ್ಸರವು ಎಲ್ಲರಿಗೂ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. ಸವಾಲುಗಳ ಕಹಿಯನ್ನು ನುಂಗಿ, ಯಶಸ್ಸಿನ ಸಿಹಿ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.
ಅವರವರ ಧರ್ಮ, ಹಬ್ಬಗಳ ಆಚರಣೆಗೆ ಸ್ವಾತಂತ್ರ್ಯ ಇದೆ. ಯಾರೂ ಕಾನೂನಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಜಿಲ್ಲಾ ಎಸ್ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಜನತೆ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದಿದ್ದಾರೆ.
"ಸೃಷ್ಟಿಯ ಮೊದಲ ದಿನ
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳು ಚಿಗುರೊಡೆಯುವ ಮೊದಲ ದಿನ
ಶುಭಕೃತು ನಾಮ ಸಂವತ್ಸರದ ಮೊದಲ ದಿನ.ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" : ಮುಖ್ಯಮಂತ್ರಿ @BSBommai#Ugadi2022 pic.twitter.com/dDxrlpXCFZ
— CM of Karnataka (@CMofKarnataka) April 2, 2022