Wednesday, July 6, 2022

Latest Posts

ಯುಗಾದಿ ʼಧಾರ್ಮಿಕ ದಿನʼ ಕಾರ್ಯಕ್ರಮಕ್ಕೆ ನಿಪ್ಪಾಣಿಯಲ್ಲಿ ಚಾಲನೆ ನೀಡಿದ ಸಚಿವೆ ಶಶಿಕಲಾ‌ ಜೊಲ್ಲೆ

ಹೊಸದಿಗಂತ ವರದಿ, ಚಿಕ್ಕೋಡಿ 
ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದಲ್ಲಿ ಹಮ್ಮಿಕೊಂಡಿರುವ ʼಧಾರ್ಮಿಕ ದಿನʼ ಕಾರ್ಯಕ್ರಮಕ್ಕೆ ಧಾರ್ಮಿಕ‌ದತ್ತಿ ಇಲಾಖೆ ಸಚಿವೆ ಶಶಿಕಲಾ‌ಜೊಲ್ಲೆ ತಮ್ಮ ಸ್ವಕ್ಷೇತ್ರ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ವಿರುಪಾಕ್ಷ ಲಿಂಗ, ಗೋಮಾತೆಗೆ ಹಾಗೂ ಗುಡಿ ಪಾಡ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಹಿಂದು ಸನಾತನ ಧರ್ಮದ ಪವಿತ್ರ ಹಬ್ಬವಾದ ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಶನಿವಾರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ್ಯಂತ ಇಂದು ಮುಜರಾಯಿ ಇಲಾಖೆಯಿಂದ‌ ನಡೆಯುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಸಾಥ್ ನೀಡಿದರು. ವಿರುಪಾಕ್ಷಲಿಂಗ ಸಮಾಧಿಮಠದ ಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿದವು.
ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಚಿಕ್ಕೋಡಿ ಉಪವಿಭಾಗಾದಿಕಾರಿ ಸಂತೋಷ ಕಾಮಗೌಡ, ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss