ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜಿಕೀಯ ಕಂಟಕದಲ್ಲಿ ಶ್ರೀಲಂಕಾ: ಅಲ್ಪಮತಕ್ಕೆ ಕುಸಿದ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ರಾಜಕೀಯದಲ್ಲೂ ಬಿಗು ವಾತಾವರಣ ನಿರ್ಮಾಣವಾಗಿದ್ದು, ಪ್ರಕ್ಷುಬ್ಧಗೊಂಡಿದೆ.ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷ (ಎಸ್‌ಎಲ್‌ಪಿಪಿ) ಮಂಗಳವಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ.
ಈ ಹಿನ್ನೆಲೆ ಸ್ವಪಕ್ಷ ಮತ್ತು ಮೈತ್ರಿ ಪಕ್ಷಗಳ 42 ಸಂಸದರು ಸ್ವತಂತ್ರವಾಗಿ ಕುಳಿತುಕೊಳ್ಳುವುದಾಗಿ ಘೋಷಿಸಿದ್ದಾರೆ.
225 ಸಂಸತ್​ ಸ್ಥಾನಗಳಲ್ಲಿ ಎಸ್‌ಎಲ್‌ಪಿಪಿ ನೇತೃತ್ವದ ಮೈತ್ರಿಕೂಟ 146 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿತ್ತು. ಇದೀಗ 42 ಸಂಸದರು ತಟಸ್ಥವಾಗಿರುವುದಿಂದ ಬಹುಮತ ಕಳೆದುಕೊಂಡು ಅಲ್ಪಮತಕ್ಕೆ ಕುಸಿದಿದೆ.
42 ಜನ ಪೈಕಿ 14 ಮಂದಿ ಶ್ರೀಲಂಕಾ ಫ್ರೀಡಂ ಪಕ್ಷ ಮತ್ತು 12 ಜನ ಎಸ್‌ಎಲ್‌ಪಿಪಿ ಸಂಸದರಾಗಿದ್ದು, ಉಳಿದವರು ಮೈತ್ರಿಕೂಟದ ಸಂಸದರು ಸೇರಿದ್ದಾರೆ.
ಇತ್ತ, ಸೋಮವಾರ ರಾತ್ರಿಯಷ್ಟೇ ಅಧ್ಯಕ್ಷ ಗೋತಬಯ ರಾಜಪಕ್ಸೆ ನಾನು ರಾಜೀನಾಮೆ ಮಾತ್ರ ನೀಡುವುದಿಲ್ಲ. ಬೇಕಾದರೆ ಸಂಸತ್ತಿನಲ್ಲಿ 113 ಸ್ಥಾನಗಳನ್ನು ಹೊಂದಿರುವ ಯಾವುದೇ ಪಕ್ಷಕ್ಕೆ ಸರ್ಕಾರವನ್ನು ಹಸ್ತಾಂತರಿಸಲು ಸಿದ್ಧ ಎಂದು ಹೇಳಿದ್ದರು. ಅ
ಇದೀಗ ಆಡಳಿತಾರೂಢ ಸಂಸದರೇ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳಲು ನಿರ್ಧರಿಸಿರುವುದರಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!