ರಾಜ್ಯದಲ್ಲಿ ಮದ್ಯಪ್ರಿಯರಿಗೆ ನಿರಾಸೆ‌‌: ಬಾರ್​ಗಳ ಮುಂದೆ ನೋ ಸ್ಟಾಕ್ ಬೋರ್ಡ್?

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜ್ಯದಲ್ಲಿ ಮದ್ಯಪ್ರಿಯರಿಗೆ ನಿರಾಸೆ‌‌ ಆಗುವ ಸುದ್ದಿ ಹರಿದಾಡುತ್ತಿದೆ. ರಾಜ್ಯದ ಬಾರ್​ಗಳ ಮುಂದೆ ನೋ ಸ್ಟಾಕ್ ಬೋರ್ಡ್ ಶೀಘ್ರದಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆವಿದ್ದು, ಕೆ. ಎಸ್. ಬಿ. ಸಿ. ಎಲ್ ನಿಂದ ಬಾರ್ ಅಂಡ್ ವೈನ್ ಶಾಪ್​ಗಳಿಗೆ ಮದ್ಯ ಸರಬರಾಜಿನಲ್ಲಿ ತೊಂದರೆ ಎದುರಾಗಲಿದೆ ಎಂದು ಬಾರ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಹೊಸ ಸಾಫ್ಟ್‌ವೇರ್ ಅಳವಡಿಕೆ ಮಾಡಲಾಗಿದ್ದು, ಇದರಿಂದ ಬಿಲ್ ಆಗುವುದು ತಡವಾಗುತ್ತಿದೆ. ಜೊತೆಗೆ ಸರ್ವರ್ ಸಮಸ್ಯೆ ಕೂಡ ಇದ್ದು, ಹೀಗಾಗಿ, ಇಂದಿನಿಂದ ಬಹುತೇಕ ಬಾರ್ ಗಳಲ್ಲಿ ಎಣ್ಣೆ ಖಾಲಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!