ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಬೆಂಗಳೂರಿನಲ್ಲಿ ಐದು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ದೌಡಾಯಿಸಿದ್ದು ಬೆದರಿಕೆ ಇರುವ ಎಲ್ಲ ಶಾಲೆಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
Karnataka | Threat mail received by various schools across Bengaluru. Search operations are underway in these schools: Bengaluru City Police
— ANI (@ANI) April 8, 2022
ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ಮಾಹಿತಿ ನೀಡಿದ್ದು, ಬೆ:ಗ್ಗೆ ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಆದರೆ ಎಲ್ಲ ಶಾಲೆಗಳಲ್ಲಿಯೂ ಪರಿಶೀಲನೆ ನಡೆಸಿದ್ದು, ಯಾವುದೇ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪೋಷಕರು ಆತಂಕ ಪಡದಂತೆ ಮನವಿ ಮಾಡಿದ್ದಾರೆ.
Karnataka | The threat mail received by various schools of Bengaluru City states that a "very powerful bomb" has been planted in the school.
— ANI (@ANI) April 8, 2022
ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಹೆನ್ನೂರಿನ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ ಮತ್ತು ಗೋವಿಂದಪುರದ ಇಂಡಿಯನ್ ಪಬ್ಲಿಕ್ ಸ್ಕೂಲ್ಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಶಾಲೆಯ ಸುತ್ತಮುತ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶಾಲೆಯಲ್ಲಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಮುಂಭಾಗ ವಿದ್ಯಾರ್ಥಿಗಳ ಪೋಷಕರು ಆಗಮಿಸುತ್ತಿದ್ದಾರೆ.