ಸಹಕಾರ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಎರಡು ದಿನಗಳ ಸಮ್ಮೇಳನ; ಅಮಿತ್‌ ಶಾ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಂಸದೀಯ ಸ್ಥಾಯಿ ಸಮಿತಿಯು ವಿವೇಕದಿಂದ ವರ್ತಿಸಿ ಎಂದು ಸೂಚಿಸಿದ ಬೆನ್ನಲ್ಲೇ ಎಚ್ಚತ್ತುಕೊಂಡಿರುವ ಸಹಕಾರ ಸಚಿವಾಲಯ ತನ್ನ ಹೊಸ ನೀತಿಯ ಕುರಿತು ಸಮಾಲೋಚನೆ ಬಗ್ಗೆ ಪ್ರಸ್ತಾವನೆ ಮಾಡಲಿದೆ. ಅದಕ್ಕಾಗಿ ಇದೇ ತಿಂಗಳ 12ನೇ ತಾರೀಖು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಈ ಸಮಾವೇಶವನ್ನು ಸಹಕಾರಿ ಸಚಿವ ಅಮಿತ್‌ ಶಾ ಉದ್ಘಾಟನೆ ಮಾಡಲಿದ್ದಾರೆ. ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ನೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ. ಸಹಕಾರಿ ಸಂಘಗಳನ್ನು ತಳಮಟ್ಟದವರೆಗೆ ವಿಸ್ತರಿಸುವ ಮತ್ತು ಸಹಕಾರ ಕ್ಷೇತ್ರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಹೊಸ ನೀತಿಯ ಕುರಿತು ಸಲಹೆಗಳನ್ನು ಕೋರಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದಿತ್ತು. ಈ ಸಂಬಂಧ ಇದುವರೆಗೆ 54 ಸಲಹೆಗಳನ್ನು ಸ್ವೀಕರಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳಲ್ಲಿ 10 ಆಯಾ ಕೇಂದ್ರ ಸಚಿವಾಲಯಗಳು, 20 ರಾಜ್ಯಗಳು ಮತ್ತು ಉಳಿದ ಸಲಹೆಗಳು ಫೆಡರೇಶನ್‌ಗಳಿಂದ ಬಂದವುಗಳೆಂದು ಮಾಹಿತಿ ನೀಡಿದ್ದಾರೆ.
ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಸಭೆಯು ಆರು ವಿಷಯಗಳನ್ನು ಕೇಂದ್ರೀಕರಿಸಿದೆ ಎನ್ನಲಾಗಿದೆ. “ಕಾನೂನು ಚೌಕಟ್ಟು, ಕಾರ್ಯಾಚರಣೆಯ ಅಡೆತಡೆಗಳು ಮತ್ತು ಅವುಗಳ ನಿವಾರಣೆಗೆ ಅಗತ್ಯವಿರುವ ಕ್ರಮಗಳು, ವ್ಯವಹಾರವನ್ನು ಸುಲಭಗೊಳಿಸುವುದು, ಸಹಕಾರಿ ಸಂಸ್ಥೆಗಳು, ಖಾತೆ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಉದ್ಯಮಶೀಲತೆ ಪ್ರಚಾರ, ತರಬೇತಿ ಮತ್ತು ಶಿಕ್ಷಣ, ಸಾಮಾಜಿಕ ಸಹಕಾರ ಸಂಸ್ಥೆಗಳು ಮತ್ತು ಸಾಮಾಜಿಕ ಭದ್ರತೆಯಲ್ಲಿ ಸಹಕಾರ ಸಂಘಗಳ ಪಾತ್ರದ ಬಗ್ಗೆ ಗಮನಹರಿಸಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರದ ಅಧಿಕಾರಿಗಳು ಕೃಷಿ, ಗ್ರಾಮೀಣ ಮತ್ತು ಜವಳಿ ಇಲಾಖೆ ಮೂರು ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here