ಶ್ರೀರಾಮ ನವಮಿಯಂದು ಪಾನಕ- ಕೋಸಂಬರಿ ತಯಾರಿಸುವುದರ ಹಿಂದಿನ ವಿಶೇಷತೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶ್ರೀರಾಮನವಮಿ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹಬ್ಬ. ಯುಗಾದಿ ಹಬ್ಬ ಕಳೆದ ಒಂಭತ್ತನೇ ದಿನದಂದು ಈ ನವಮಿ ಆಚರಣೆ ಮಾಡುತ್ತಾರೆ. ಈ ದಿನದಂದು ರಾಮನಿಗೆ ಬೆಲ್ಲದ ಪಾನಕ ಹಾಗೂ ಹೆಸರು ಬೇಳೆ ನೈವೇದ್ಯ ನೀಡಿದರೆ ಆತ ಸಂತೃಪ್ತನಾಗುತ್ತಾನೆ ಎಂಬುದು ವಿಶೇಷ. ಈ ದಿನ ಕೇವಲ ಪಾನಕ ಹಾಗೂ ಕೋಸಂಬರಿ ಮಾತ್ರ ಯಾಕೆ ವಿಶೇಷ ಎಂದು ನೋಡೋಣ ಬನ್ನಿ.
ಬೇಸಿಗೆಯ ಚೈತ್ರಮಾಸ ಅತ್ಯಂತ ಉಷ್ಣಾಂಶದಿಂದ ಕೂಡಿರುತ್ತದೆ. ಪ್ರಕೃತಿಯ ಒಡಲು ಕೆಂಡದಂತೆ ಸುಡುತ್ತಿರುತ್ತದೆ. ಈ ವೇಳೆ ತಣ್ಣನೆಯ ಬೆಲ್ಲದ ಪಾನಕ ಸೇವನೆ ಮಾಡುವುದರಿಂದ ಆರೋಗ್ಯ ಹಾಗೂ ಆಯಸ್ಸ ಅಭಿವೃದ್ದಿ ಆಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಪಾನಕದಲ್ಲಿ ಸೇರಿಸುವ ಕೆಲ ಸುಗಂಧ ದ್ರವ್ಯಗಳಿಂದಾಗಿ ನಮ್ಮ ದೇಹದಲ್ಲಿನ ಕೆಲ ಕಟ್ಟ ರೋಗ ರುಜಿನಗಳು ನಾಶವಾಗುತ್ತವೆ. ಅದರ ಜೊತೆಗೆ ಪಾನಕ ಅಂದರೆ ಭಗವಾನ್‌ ವಿಷ್ಣುವಿಗೆ ಪ್ರಿಯವಾದುದ್ದಾಗಿದೆ. ವಿಷ್ಣು ರಾಮನ ಅವತಾರದಲ್ಲಿ ಜನ್ಮ ತಾಳಿದ್ದರಿಂದ ಸ್ವಾಮಿಗೆ ಪಾನಕ ನೈವೇದ್ಯ ಮಾಡುವುದು ರೂಢಿಯಲ್ಲಿದೆ.
ಪಾನಕ ತಯಾರಿಸುವ ವಿಧಾನ:
ಬೆಲ್ಲ-3 ಕಪ್‌, ಕರಿ ಮೆಣಸಿನ ಪುಡಿ- 3 ಟೀ ಸ್ಪೂನ್‌, ಉಪ್ಪು-ಚಿಟಿಕೆ, ಏಲಕ್ಕಿ ಪುಡಿ-ಟೀ ಸ್ಪೂನ್‌, ನೀರು-9 ಕಪ್.

ಮೊದಲಿಗೆ ಬೆಲ್ಲವನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಬೆರೆಸಬೇಕು. ಬೆಲ್ಲ ಮಿಶ್ರಣವಾದ ಬಳಿಕ ಕರಿಮೆಣಸಿ ಪುಡಿ, ಏಲಕ್ಕಿ ಪುಡಿ, ಸ್ವಲ್ಪ ಉಪ್ಪು, ಹಾಕಿ ಚೆನ್ನಾಗಿ ಮಿಶ್ರಣಮಾಡಿದ್ರೆ ಮುಗೀತು ರಾಮನಿಗೆ ಬೆಲ್ಲದ ಪಾನಕ ರೆಡಿ.
ಕೋಸಂಬರಿ ವಿಧಾನ:
ಹೆಸರು ಬೇಳೆ-ಒಂದು ಕಪ್‌, ಹಸಿ ಮೆಣಸು-1/2, ಹೆಚ್ಚಿದ ಕೊತ್ತಂಬರಿ ಸೊಪ್ಪು- ಎರಡು ಸ್ಪೂನ್‌, ತುರಿದ ಹಸಿ ತೆಂಗಿನಕಾಯಿ- ಕಾಲು ಕಪ್‌, ಉಪ್ಪು-ರುಚಿಗೆ ತಕ್ಕಷ್ಟು, ನಿಂಬೆಹಣ್ಣು-ಅರ್ಧ.
ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅರ್ಧ ಅಥವಾ ಒಂದು ಗಂಟೆಯ ಕಾಲ ನೀರಿನಲ್ಲಿ ನೆನಸಿಡಬೇಕು. ನೆನೆದ ಬಳಿಕ ನೀರನ್ನು ಬಸಿದು ಅದಕ್ಕೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹಸಿ ತೆಂಗಿನ ಕಾಯಿ ತುರಿ, ಉಪ್ಪು ಎಲ್ಲವನ್ನು ಹಾಕಿ ಸ್ವಲ್ಪ ನಿಂಬೆಹಣ್ಣಿನ ರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿದ್ರೆ ಕೋಸಂಬರಿ ರೆಡಿ (ಒಗ್ಗರಣೆ ಮಾಡುವುದು ಆಯ್ಕೆ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!