BIG NEWS | ಮತ್ತೊಂದು ಶಾಲೆಗೆ ಬಂತು ಬಾಂಬ್‌ ಬೆದರಿಕೆ ಇ-ಮೇಲ್‌: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಹಿಂದೆಯಷ್ಟೇ 8 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಕಳಿಸಿದ್ದ ಕೀಡಿಗೇಡಿಗಳು ಇದೀಗ ಬೆಂಗಳೂರು ನಗರದ ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ ಮೇಲ್‌ ಕಳುಹಿಸಿದ್ದಾರೆ.
ನಗರದ ಬಿಷಪ್‌ ಕಾಟನ್‌ ಸ್ಕೂಲ್‌ಗೆ ಬೆದರಿಕೆ ಮೇಲ್‌ ಬಂದಿದ್ದು, ಸ್ಥಳಕ್ಕೆ ಕಬ್ಬನ್‌ ಪಾರ್ಕ್ ಪೊಲೀಸರು, ಶ್ವಾನದಳ ಆಗಮಿಸಿದ್ದು, ತಪಾಸಣೆ ಮಾಡಿದ್ದಾರೆ.
ಮೊನ್ನೆಯಷ್ಟೇ ನಗರದ 8 ಶಾಲೆಗಳಿಗೆ ಕಿಡಿಗೇಡಿಗಳು ಇ ಮೇಲ್‌ ಕಳುಹಿಸಿದ್ದರು. ನಂತ್ರ ಶಾಲೆಗಳಿಗೆ ಪೊಲೀಸರು ದೌಡಾಯಿಸಿ, ಮಕ್ಕಳು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಹೊರಗೆ ಕಳಿಸಿ, ನಂತ್ರ ತಪಾಸಣೆ ನಡೆಸಿದ್ದರು. ನಂತ್ರ ಇದೊಂದು ಹುಸಿ ಬೆದರಿಕೆ, ಕೀಡಿಗೇಡಿಗಳ ಕೃತ್ಯ ಅನ್ನೋದು ಬಯಲಾಯುತಿ. ಸಧ್ಯ ಇಂತಹದ್ದೆ ಮೇಲ್‌ ಬಿಷಪ್‌ ಕಾಟನ್‌ ಸ್ಕೂಲ್‌ಗೆ ಬಂದಿದ್ದು, ಪೊಲೀಸರು ತಪಾಸಣೆ ಕಾರ್ಯ ಶುರು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!