Tuesday, July 5, 2022

Latest Posts

ಡಾಕ್ಟರೇಟ್‌ ಪಡೆದು ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ: ನಟ ರವಿಚಂದ್ರನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಾಕ್ಟರೇಟ್ ಪದವಿ ಪಡೆದು ಇದೀಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. 60 ವರ್ಷ ತುಂಬಿದ್ಮೇಲೆ ಮತ್ತೊಂದು ಹೊಸ ಯುಗ ಆರಂಭವಾಗುತ್ತೆ ಅಂತ ನಾನು ಪ್ರತಿ ಸಲ ಹೇಳ್ತೀನಿ. ಇದೀಗ ಈ ಪದವಿಯಿಂದ ಮತ್ತೊಂದು ಶಕ್ತಿ, ಉತ್ಸಾಹ ಸಿಕ್ಕಿದೆ ಎಂದು ನಟ ರವಿಚಂದ್ರನ್‌ ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ರವಿಚಂದ್ರನ್‌ ಅವರಿಗೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.
ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರೇ ಪದವಿ, ಚಿನ್ನದ ಪದಕ ಪಡೆದಿದ್ದು, ಹೆಣ್ಮಕ್ಕಳ ಸಾಧನೆಯನ್ನು ಕೊಂಡಾಡಿದರು.
ಸಚಿವ ಅಶ್ವತ್ಥ್ ನಾರಾಯಣ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss