ಹೊಸ ದಿಗಂತ ಡಿಜಿಟಲ್ ಡೆಸ್ಕ್
ನ್ಯೂಯಾರ್ಕ್’ನ ಬ್ರೂಕ್ಲಿನ್ ನೆಲಮಾಳಿಗೆ ರೈಲು ಸ್ಟೇಷನ್’ನಲ್ಲಿ ಅಪರಿಚಿತ ಮುಸುಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ.
ಮೊದಲು ಸಬ್ವೆ ಸ್ಟೇಷನ್ ತುಂಬ ಹೊಗೆಯೆಬ್ಬಿಸಿ, ಜನರು ಗೊಂದಲದಲ್ಲಿರುವಾಗಲೇ ಮುಸುಕುದಾರಿ ಆಗಂತುಕ ಸುಮಾರು 30 ಸುತ್ತು ಶೂಟ್ ಮಾಡಿದ್ದಾನೆ ಎನ್ನಲಾಗಿದೆ. ಈವರೆಗೆ ಯಾರ ಸಾವಿನ ಸುದ್ದಿಯೂ ಬಂದಿಲ್ಲವಾದರೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ನಡೆಸಿದವನನ್ನು ಪೊಲೀಸರು ಇನ್ನೂ ಹುಡುಕುತ್ತಿದ್ದಾರೆ. ಆತನಿಗೆ ಸ್ಟೇಷನ್ ತಲುಪಿಕೊಳ್ಳುವುದಕ್ಕೆ ವಾಹನ ಕೊಟ್ಟವರನ್ನು ಪತ್ತೆ ಮಾಡಿ ವಿಚಾರಣೆ ಆರಂಭವಾಗಿದೆ.