ಹಾರ್ದಿಕ್‌ ಅಬ್ಬರಕ್ಕೆ ಮಂಕಾದ ರಾಜಸ್ಥಾನ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಾರ್ದಿಕ್‌ ಪಾಂಡ್ಯ ಅಬ್ಬರಕ್ಕೆ ತತ್ತರಿಸಿದ ರಾಜಸ್ಥಾನ್‌ ರಾಯಲ್‌ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 37 ರನ್‌ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಗುಜರಾತ್‌ ಟೈಟಾನ್ಸ್‌ ಪರ ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧಶತಕ‌ (87 ರನ್‌) ಸಿಡಿಸಿದರು. ಕನ್ನಡಿಗ ಅಭಿನವ್‌ ಮನೋಹರ್‌ (43), ಡೇವಿಡ್‌ ಮಿಲ್ಲರ್‌ (31) ಸಹ ಉತ್ತಮ ಕಾಣಿಕೆ ನೀಡಿದ್ದರಿಂದ ಟೈಟಾನ್ಸ್‌ ನಿಗದಿತ 20 ಓವರ್‌ ಗಳಲ್ಲಿ 192 ರನ್‌ ಗಳ ಬೃಹತ್‌ ಮೊತ್ತ ಕಲೆಹಾಕಿತು.
ಬೃಹತ್‌ ಗುರಿ ಬೆನ್ನತ್ತಿದ ರಾಜಸ್ಥಾನ ಆರಂಭಿಕ ಆಟಗಾರ ಜೋಸ್‌ ಬಟ್ಲರ್‌ (54) ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ ಗಳಲ್ಲಿ ಕೇವಲ 155 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಟೈಟಾನ್ಸ್‌ ಪರ ಲೋಕಿ ಫರ್ಗ್ಯೂಸನ್‌ ಹಾಗೂ ಯಶ್‌ ದಯಾಳ್‌ ತಲಾ 3 ವಿಕೆಟ್‌ ಗಳನ್ನು ಕಿತ್ತರು.
ಚೊಚ್ಚಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೈಟಾನ್ಸ್‌ ಈ ಗೆಲುವಿನೊಂದಿಗೆ ಆಡಿರುರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ ಟೂರ್ನಿಯಲ್ಲಿ ಎರಡನೇ ಸೋಲು ಕಾಣುವುದರಒಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!