Friday, December 8, 2023

Latest Posts

ಇಮ್ರಾನ್‌ ಖಾನ್‌ ರಷ್ಯಾ ಭೇಟಿಯು ಉಕ್ರೇನ್ ಯುದ್ಧಕ್ಕಿಂತಲೂ ಮೊದಲೇ ನಿಗದಿಯಾಗಿತ್ತು ಎಂದ ಪಾಕ್‌ ಸೇನೆ.

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿದ ಮರುದಿನವೇ ಇಮ್ರಾನ್‌ ಖಾನ್‌ ರಷ್ಯಾ ಪ್ರವಾಸ ಕೈಗೊಂಡಿದ್ದರಿಂದ ಪಾಕ್‌ಗೆ ಮುಜುಗರವುಂಟಾಗಿತ್ತು. ಆದರೆ ಈ ಭೇಟಿಯ ಹಿಂದೆ ಸೇನೆಯ ನಿರ್ಧಾರವಿದ್ದು ಉಕ್ರೇನ್‌ ಯುದ್ಧಕ್ಕಿಂತ ಮೊದಲೇ ಭೇಟಿ ನಿಗದಿಯಾಗಿತ್ತು ಎಂದು ಪಾಕ್‌ ಸೇನೆ ಹೇಳಿದೆ.

ಈ ಕುರಿತು ಪಾಕ್ ಸೇನೆಯ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿಕೆ ನೀಡಿದ್ದು “ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಗುವ ಮೊದಲು ಇಮ್ರಾನ್ ಖಾನ್ ಅವರ ಮಾಸ್ಕೋ ಭೇಟಿಯನ್ನು ಯೋಜಿಸಲಾಗಿತ್ತು. ಪ್ರಧಾನಿ ಅಲ್ಲಿರುವಾಗಲೇ ಪುಟಿನ್‌ ಯುದ್ಧ ಘೋಷಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಇದರಿಂದಾಗಿ ಅವರು ʼಮುಜುಗರʼಕ್ಕೊಳಗಾಗುವಂತಾಯಿತು. ಸೇನೆಯ ನಿರ್ಧಾರದಲ್ಲಿ ಪ್ರಧಾನಿ ತಮ್ಮನ್ನು ತೊಡಗಿಸಿಕೊಂಡಿದ್ದರು, . ಉಕ್ರೇನ್ ಮೇಲೆ ರಷ್ಯಾದ ದಾಳಿ ಅನಿರೀಕ್ಷಿತವಾಗಿತ್ತ. ಸೇನೆಯ ಸಾಂಸ್ಥಿಕ ಇನ್‌ ಪುಟ್‌ ಆಧಾರದ ಮೇಲೆ ಅವರು ತಮ್ಮ ರಷ್ಯಾ ಭೇಟಿಯನ್ನು ಮುಂದುವರಿಸಬೇಕು ಎಂದು ಸೇನೆ ಅಭಿಪ್ರಾಯ ಪಡುತ್ತದೆ” ಎಂದು ಅವರು ಹೇಳಿದ್ದಾರೆ.

ಇಮ್ರಾನ್‌ ಖಾನ್‌ ರಷ್ಯಾ ಭೇಟಿಯ ವಿರುದ್ಧ ಅಮೇರಿಕವು ತನ್ನ ಅಸಮಾಧಾನವನ್ನು ಹೊರಹಾಕಿ ರಷ್ಯಾ ಭೇಟಿ ರದ್ದು ಪಡಿಸಲು ಆಗ್ರಹಿಸಿತ್ತು. ಈ ಕುರಿತು ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ “ನನ್ನ ಸೋಲಿಗೆ ಅಮೇರಿಕ ಪಿತೂರಿ ನಡೆಸಿದೆ.ಇಮ್ರಾನ್ ಖಾನ್ ಅವಿಶ್ವಾಸ ಮತವನ್ನು ಗೆದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಯುಎಸ್ ರಾಜತಾಂತ್ರಿಕ ಡೊನಾಲ್ಡ್ ಲು ಪಾಕಿಸ್ತಾನದ ರಾಯಭಾರಿ ಅಸಾದ್‌ ಮಜೀದ್‌ ಗೆ ಎಚ್ಚರಿಸಿದ್ದರು ” ಎಂದು ಆರೋಪಿಸಿದ್ದರು. ಅವರ ಈ ಆರೋಪವನ್ನು ತಳ್ಳಿ ಹಾಕಿರುವ ಶ್ವೇತ ಭವನವು ರಷ್ಯಾ ಭೇಟಿ ಕುರಿತಾಗಿ ತನ್ನ ನಿಲುವನ್ನು ಇಸ್ಲಾಮಾಬಾದ್‌ ಗೆ ಸ್ಪಷ್ಟವಾಗಿ ರವಾನಿಸಿರುವುದಾಗಿ ಹೇಳಿದೆ. ‌

ಆದರೆ ಈಗ ಪಾಕ್‌ ಸೇನೆಯು ಖಾನ್ ರಷ್ಯಾ‌ ಭೇಟಿಯಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದ್ದು ಅವರು ಭೇಟಿ ಮುಂದುವರಿಸಬೇಕು ಎಂದು ಹೇಳಿದೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!